Mysore
17
few clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಸಫಾರಿ ಬಂದ್; ವರ್ಷಾಂತ್ಯದಲ್ಲಿ ರೆಸಾರ್ಟ್‌ಗಳಿಗೆ ನಷ್ಟ

ಮಂಜು ಕೋಟೆ

ಹೊಸ ವರ್ಷದ ಸನಿಹದಲ್ಲಿ ತುಂಬಿ ತುಳುಕುತ್ತಿದ್ದ ರೆಸಾರ್ಟ್‌ಗಳು ಖಾಲಿ ಖಾಲಿ

ಎಚ್.ಡಿ.ಕೋಟೆ: ರೈತರ ಮೇಲೆ ನಿರಂತರ ಹುಲಿ ದಾಳಿ ಹಿನ್ನೆಲೆಯಲ್ಲಿ ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಈ ಹೊಸ ವರ್ಷದ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ರೆಸಾರ್ಟ್‌ಗಳಿಗೆ ಪ್ರವಾಸಿಗರು ಬಾರದೆ ಕೋಟ್ಯಂತರ ರೂ. ನಷ್ಟವಾಗುತ್ತಿರುವುದು ಬೆಳಕಿಗೆ ಬಂದಿದೆ.

ಕ್ಷೇತ್ರದ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಬಡಗಲಪುರ, ಹಳೇಹೆಗ್ಗುಡಿಲು, ಬೆಣ್ಣೆಗೆರೆ, ಕೂಡಗಿ ಗ್ರಾಮಗಳಲ್ಲಿ ರೈತರ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿ ಮೂವರನ್ನು ಬಲಿ ಪಡೆದಿದ್ದ ಘಟನೆ ರಾಜ್ಯದಲ್ಲೇ ಆತಂಕ ಸೃಷ್ಟಿಸಿದ್ದವು. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು, ರೈತಸಂಘದವರು ತಮ್ಮ ಆಕ್ರೋಶವನ್ನು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮೇಲೆ ವ್ಯಕ್ತಪಡಿಸಿ, ಸಫಾರಿ ನಿಷೇಧಿಸುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯದ ವ್ಯಾಪ್ತಿಯಲ್ಲಿದ್ದ ಎರಡು ಸಫಾರಿ ಕೇಂದ್ರಗಳನ್ನು ಬಂದ್ ಮಾಡಲು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದರು.

ಆನಂತರ ಹುಲಿಗಳ ಹಾವಳಿಗೆ ಕಡಿವಾಣ ಬಿದ್ದು, ಯಾವುದೇ ರೈತರ ಮೇಲೆ ಹುಲಿ ದಾಳಿ ಪ್ರಕರಣಗಳು ಮರುಕಳಿಸಲಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘಗಳವರು, ಜನರು, ಮತ್ತೆ ಸ-ರಿಯನ್ನು ಆರಂಭಿಸಬಾರದು. ಒಂದುವೇಳೆ ಆರಂಭಿಸಿದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ಕೇಂದ್ರ ಬಂದ್ಆಗಿರುವುದರಿಂದ ಈ ಭಾಗದ ಸರ್ಕಾರದ ಕಾರಾಪುರ ಜಂಗಲ್ ಲಾಡ್ಜ್ ರೆಸಾರ್ಟ್ ಸೇರಿದಂತೆ ೨೦ಕ್ಕೂ ಖಾಸಗಿ ರೆಸಾರ್ಟ್‌ಗಳಿಗೆ ಪ್ರವಾಸಿಗರ ಸಂಖ್ಯೆ ದಿನಗಳಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಭಾರೀ ನಷ್ಟವಾಗಿ ರೆಸಾರ್ಟ್‌ಗಳು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅನೇಕ ರೆಸಾರ್ಟ್‌ಗಳ ಮಾಲೀಕರು, ಉದ್ಯೋಗಿಗಳು ಮತ್ತೆ ಸಫಾರಿ ಆರಂಭಿಸುವಂತೆ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ. ಸಫಾರಿಯಿಂದ ಸರ್ಕಾರಕ್ಕೆ ಬರುವ ಆದಾಯ ಹಾಗೂ ರೈತರ ಸಾವು, ನೋವುಗಳ ವಿಚಾರವಾಗಿ ಜ.೪ರಂದು ನಡೆಯುವ ಸಭೆಯಲ್ಲಿ ಸಚಿವರು, ಶಾಸಕರು, ಜನಪ್ರತಿನಿಽಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

” ಸಫಾರಿ ಬಂದ್ ಆಗಿರುವುದರಿಂದ ಕಾಡಂಚಿನ ಪ್ರದೇಶಗಳಲ್ಲಿ ಹುಲಿಗಳ ಹಾವಳಿ ಕಡಿಮೆಯಾಗಿ, ರೈತರ ಸಾವು ನೋವು ಇಲ್ಲದಂತಾಗಿದೆ. ನಾವು ಈ ಭಾಗದ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಭೀತಿ ಕಡಿಮೆಯಾಗಿದೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಚಿವರು ಮತ್ತು ಶಾಸಕರು, ಉನ್ನತ ಅಽಕಾರಿಗಳು ಯಾವುದೇ ಒತ್ತಡಗಳಿಗೆ ಮಣಿಯದೆ ಕೆಲಸ ನಿರ್ವಹಿಸಬೇಕು.”

-ವೆಂಕಟೇಶ್, ರೈತ, ಬಡಗಲಪುರ 

” ವರ್ಷದ ಕೊನೆಯ ಎರಡು ತಿಂಗಳಿನಿಂದ ಸಫಾರಿ ಬಂದ್ ಆಗಿರುವುದರಿಂದ ಕಾರಾಪುರ ಜಂಗಲ್ ರೆಸಾರ್ಟ್‌ಗೆ ಪ್ರವಾಸಿಗರ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ. ೩೩ ಕಾಟೇಜ್‌ಗಳು ಪೈಕಿ ೨-೩ ಕಾಟೇಜ್‌ಗಳಿಗೆ ಮಾತ್ರ ಪ್ರವಾಸಿಗರು ಬರುತ್ತಿದ್ದಾರೆ. ಇದರಿಂದಾಗಿ ವರ್ಷದ ಕೊನೆಯ ಈ ತಿಂಗಳಿನಲ್ಲಿ ೩ ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮತ್ತು ನಿಗಮದ ಅಧ್ಯಕ್ಷರಿಗೆ ವಿಚಾರ ತಿಳಿಸಲಾಗಿದೆ. ಹೀಗೆಯೇ ಮುಂದುವರಿದರೆ ರಾಜ್ಯದ ಜೆಎಲ್‌ಆರ್ ಅನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗಲಿದೆ.”

-ಕಾರ್ತಿಕ್, ವ್ಯವಸ್ಥಾಪಕ, ಕಾರಾಪುರ ಜೆಎಲ್‌ಆರ್ ರೆಸಾರ್ಟ್, ಕಬಿನಿ

Tags:
error: Content is protected !!