ಮೈಸೂರಿನ ಕುವೆಂಪು ನಗರದ ಎಂ-ಬ್ಲಾಕ್‌ನಲ್ಲಿರುವ ಬನಶಂಕರಿ ದೇವಸ್ಥಾನದ ಪಾರ್ಕ್‌ನಲ್ಲಿ ಶ್ರೀಮಂತರು ತಾವು ಸಾಕಿರುವ ನಾಯಿಗಳನ್ನು ಕಲ್ಲು -ಬೆಂಚ್‌ಗಳ ಮೇಲೆ ಗಂಟೆಗಟ್ಟಲೆ ಕೂರಿಸಿಕೊಂಡು, ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರು, ವೃದ್ಧರು ಹಾಗೂ ಹಿರಿಯ ನಾಗರಿಕರು ವಾಯು ವಿಹಾರಕ್ಕೆ ಬಂದಾಗ ಸ್ವಲ್ಪ ಹೊತ್ತು ನೆಮ್ಮದಿಯಿಂದ ಕುಳಿತುಕೊಳ್ಳಲೂ ತೊಂದರೆಯಾಗುತ್ತಿದೆ.
ಕಲ್ಲು ಬೆಂಚುಗಳನ್ನು ಹಾಕಿರುವುದು, ಸಾರ್ವಜನಿಕರು ವಿಶ್ರಾಂತಿ ಪಡೆಯಲೋ ಅಥವಾ ಶ್ರೀಮಂತರು ಸಾಕಿರುವ ನಾಯಿಗಳನ್ನು ಕೂರಿಸಲೋ ಎನ್ನುವಂತಾಗಿದೆ.
ಇಷ್ಟೆ ಅಲ್ಲದೆ, ಈ ನಾಯಿಗಳು ಮಾಡುವ ಮಲ- ಮೂತ್ರವನ್ನು ಕತ್ತಲೆಯಲ್ಲಿ ವಾಕ್ ಮಾಡುವವರು ತುಳಿದುಕೊಂಡು ಹೋಗುತ್ತಿದ್ದು, ಮಾನಸಿಕವಾಗಿ ಹಿಂಸೆಯಾಗುತ್ತಿದೆ.
ಈ ಬಗ್ಗೆ ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಪಾರ್ಕ್‌ಗಳಲ್ಲಿ ನಾಯಿಗಳ ಪ್ರವೇಶವನ್ನು ನಿಷೇಽಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು





