Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಓದುಗರ ಪತ್ರ: ಯುವ ದಸರಾದ ಸ್ಥಳ ಬದಲಾವಣೆ ಸ್ವಾಗತಾರ್ಹ

ಓದುಗರ ಪತ್ರ

ದಸರಾ ಮಹೋತ್ಸವದ ಅಂಗವಾಗಿ ನಡೆಸುವ ‘ಯುವ ದಸರಾ’ ಕಾರ್ಯಕ್ರಮವನ್ನು ಮೊದಲ ಬಾರಿಗೆ ಚಾಮುಂಡಿಬೆಟ್ಟದ ಸಮೀಪದ ಉತ್ತನಹಳ್ಳಿ ಬಳಿ ಆಯೋಜಿಸಲು ಜಿಲ್ಲಾಡಳಿತ ತೀರ್ಮಾನಿಸಿರುವುದು ಸ್ವಾಗತಾರ್ಹ ಕ್ರಮ.

ಯುವ ದಸರಾ ಕಾರ್ಯಕ್ರಮವನ್ನು ಇಲ್ಲಿಯವರೆಗೂ ಮೈಸೂರಿನ ಹೃದಯ ಭಾಗವಾದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಈ ಕಾರ್ಯಕ್ರಮಕ್ಕೆ ಸಿನಿಮಾ ನಟ-ನಟಿಯರು, ಖ್ಯಾತ ಗಾಯಕರು ಆಗಮಿಸುವುದರಿಂದ ಅವರನ್ನು ನೋಡುವ ಸಲುವಾಗಿ ಸಾಕಷ್ಟು ಜನರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ.

ಮೈದಾನ ಚಿಕ್ಕದಾದ್ದರಿಂದ ಸ್ಥಳಾವಕಾಶದ ಕೊರತೆಯಿಂದ ಸಾಕಷ್ಟು ಮಂದಿ ರಸ್ತೆಯ ಅಕ್ಕಪಕ್ಕದಲ್ಲೇ ನಿಂತು ಕಾರ್ಯಕ್ರಮಗಳನ್ನು ವೀಕ್ಷಿಸಬೇಕಿತ್ತು. ಅಲ್ಲದೆ ನಗರದ ಮಧ್ಯ ಭಾಗದಲ್ಲಿಯೇ ನಡೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿತ್ತು. ಈಗ ಗುರುತಿಸಿರುವ ಸುಮಾರು ನೂರು ಎಕರೆ ಜಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಇರುವುದಲ್ಲದೇ ವರ್ತುಲ ರಸ್ತೆಯ ಸಮೀಪದಲ್ಲೇ ಇರುವುದರಿಂದ ವಾಹನ ಇರುವವರು ಬಂದು-ಹೋಗಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಜಿಲ್ಲಾಡಳಿತದ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ವಾಹನಗಳಿಲ್ಲದವರಿಗೂ ಅನುಕೂಲವಾಗಲಿದೆ.

– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

 

 

Tags:
error: Content is protected !!