ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ೫೨ ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಶ್ಲಾಘನೀಯ.
ಇದುವರೆಗೆ ಭಾರತ ಮಹಿಳಾ ತಂಡ ೨ ಬಾರಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಆಗಿತ್ತು, ಆದರೆ ಈ ಬಾರಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಭಾರತದ ಮಹಿಳೆಯರ ತಂಡ ವಿಶ್ವಕಪ್ ಗೆಲ್ಲುವ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ವಿಶ್ವಕಪ್ ಗೆಲ್ಲುವ ಮೂಲಕ ೧೫೦ ಕೋಟಿ ಭಾರತೀಯರ ಮನ ಗೆದ್ದ ಭಾರತ ಕ್ರಿಕೆಟ್ ವನಿತೆಯರು ಅಭಿನಂದನಾರ್ಹರು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





