ರಾಜ್ಯದ 18 ಆಕಾಶವಾಣಿ ಕೇಂದ್ರಗಳ ಪ್ರತಿದಿನ ಬೆಳಿಗ್ಗೆ 6.10ಕ್ಕೆ 5 ನಿಮಿಷಗಳ ಕಾಲ ‘ಚಿಂತನ’ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾದ ಮಾಡುತ್ತಿದ್ದು, ಕೇಳುಗರಿಗೆ ಉಪಯುಕ್ತ ಮಾಹಿತಿ ನೀಡುತ್ತಿವೆ.
ಈ ಕಾರ್ಯಕ್ರಮದಲ್ಲಿ ಅಂದಿನ ದಿನದ ವಿಶೇಷತ, ಹಬ್ಬ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ, ಸಮಾಜಕ್ಕೆ ಕೊಡುಗೆ
ನೀಡಿದವರ ಬಗ್ಗೆ ವಿವಿಧ ಕ್ಷೇತ್ರಗಳ ಸಾಧಕರು ಮಾತನಾಡುತ್ತಾರೆ. ಆದರೆ, ಅ.17ರಂದು ರಾಮಾಯಣ ಮಹಾಕಾವ್ಯದ ಕರ್ತ್ಯ ‘ಮಹರ್ಷಿ ವಾಲ್ಮೀಕಿ ಜಯಂತಿ’ ಇದ್ದರೂ ಅವರ ಬಗ್ಗೆ ಈ ಕಾರ್ಯಕ್ರಮದಲ್ಲಿ ಯಾವುದೇ ಮಾಹಿತಿ ನೀಡದೇ ಹೋಗಿದ್ದು, ಕೇಳುಗರಲ್ಲಿ ಬೇಸರ ಮೂಡಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಬಸವ ಜಯಂತಿ, ಗಾಂಧಿ ಜಯಂತಿ, ಕೆಂಪೇಗೌಡರ ಜಯಂತಿ ಹೀಗೆ ಎಲ್ಲ ಜಯಂತಿಗಳಲ್ಲೂ ಅವರ ಬಗ್ಗೆ ಮಾಹಿತಿ ನೀಡುವ ಆಕಾಶವಾಣಿಯವರು ವಾಲ್ಮೀಕಿಯನ್ನು ಮಾತ್ರ ಮರೆತದ್ದು ಏಕೆ? ಇದು ಒಂದು ಸಮುದಾಯಕ್ಕೆ ಮಾಡಿದ ಅವಮಾನವಲ್ಲವೇ? ಆಕಾಶವಾಣಿಯ ನಿರ್ದೇಶಕರು ಮುಂದಿನ ದಿನಗಳಲ್ಲಾದರೂ ಹೀಗಾಗದಂತೆ ಎಚ್ಚರವಹಿಸಿ ಮಹನೀಯರ ಜಯಂತಿಗಳ ಬಗ್ಗೆ ಮಾಹಿತಿ ನೀಡುವಂತಾಗಲಿ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.