Mysore
25
clear sky

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಓದುಗರ ಪತ್ರ: ಟೋಲ್‌ ಸಮಸ್ಯೆಗಳಿಗೆ ಹೊಣೆ ಯಾರು?

ಡಿಸೆಂಬರ್‌ 5 ರಾತ್ರಿ 8.30ರ ವೇಳೆ ನಾನು ಮೈಸೂರಿನಿಂದ ನಂಜನಗೂಡಿಗೆ ಹೋಗುತ್ತಿದ್ದೆ. ನನ್ನ ಕಾರಿನಲ್ಲಿ ಫಾಸ್ಟ್ಯಾಗ್ ಇದ್ದರೂ ಟೋಲ್ ಸಿಬ್ಬಂದಿ ಸಾಫ್ಟ್‌ವೇರ್ ಅಪ್‌ಡೇಟ್ ಆಗುತ್ತಿದೆ ಎಂದು ಹೇಳಿ ನನ್ನ ಬಳಿ 30 ರೂ. ಟೋಲ್ ಶುಲ್ಕ ವಸೂಲಿ ಮಾಡಿ ರಶೀದಿ ನೀಡಿದರು.

ನಾನು ಇರಬಹುದೇನೊ ಎಂದು ಭಾವಿಸಿ ಸುಮ್ಮನಾದೆ. ಕೆಲ ಸಮಯದ ಬಳಿಕ ನನ್ನ ಫಾಸ್ಟ್ಯಾಗ್ ಖಾತೆಯಿಂದ ೬೦ ರೂ. ಕಡಿತಗೊಂಡಿರುವ ಬಗ್ಗೆ ನನಗೊಂದು ಸಂದೇಶ ಬಂತು. ಅಲ್ಲಿಗೆ ನನ್ನ ಖಾತೆಯ ಹಣ ಮತ್ತು ನಾನು ಟೋಲ್‌ನಲ್ಲಿ ನೀಡಿದ ಹಣ ಸೇರಿ ಮೈಸೂರಿನಿಂದ ನಂಜನಗೂಡಿಗೆ ೯೦ ರೂ. ಟೋಲ್ ದರ ಪಾವತಿಸಿದಂತಾಯಿತು. ನಂಜನಗೂಡಿನಲ್ಲಿ ಕೆಲಸ ಮುಗಿಸಿ ವಾಪಸ್ ಮೈಸೂರಿಗೆ ಬರುವ ವೇಳೆ ನಾನು ಟೋಲ್ ಸಿಬ್ಬಂದಿಗೆ ಈ ರೀತಿಯಾಗಿ ಹಣ ಕಡಿತಗೊಂಡಿದೆ ಎಂದು ವಿವರಿಸಿದರೆ ಅಲ್ಲಿನ ಸಿಬ್ಬಂದಿ ಇದು ಸಾಫ್ಟ್ ವೇರ್ ಸಮಸ್ಯೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದರು. ಸಾಲದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ.

ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ. ಸಾಕಷ್ಟು ಜನರಿಗೆ ಇದೇ ಸಮಸ್ಯೆ ಎದುರಾಗಿದ್ದು, ಹೆಚ್ಚಿಗೆ ಹಣ ಪಾವತಿಸಿರುವ ಉದಾಹರಣೆಗಳಿವೆ. ಈ ರೀತಿ ಹಣಕ್ಕೆ ಕತ್ತರಿ ಹಾಕುವ ಟೋಲ್‌ಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು.

-ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು

 

Tags:
error: Content is protected !!