ವಿಶ್ವವನ್ನೇ ಬೆಚ್ಚಿ ಬೀಳಿಸಿದ, ಅಪಾರ ಸಾವು-ನೋವುಗಳಿಗೆ ಕಾರಣವಾಗಿದ್ದ ಕೋವಿಡ್-19 ಸೋಂಕು ಈಗ ಮತ್ತೊಮ್ಮೆ ಜನರನ್ನು ಆತಂಕಕ್ಕೀಡು ಮಾಡಿದೆ.
ಕೋವಿಡ್ ಸೋಂಕು ತಡೆಗಟ್ಟಲು ಇಂಗ್ಲೆಂಡ್ ಮೂಲದ ಡ್ರಗ್ ಮೇಜರ್ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂಗೀಕಾರ ಪಡೆದಿದ್ದ ‘ಕೋವಿಶೀಲ್’ ಲಸಿಕೆ ಅಡ್ಡಪರಿಣಾಮ ಬೀರಬಲ್ಲದು ಎಂಬುದಾಗಿ ಸ್ವತಃ ಕಂಪೆನಿಯೇ ಒಪ್ಪಿಕೊಂಡಿದ್ದು, ಲಸಿಕೆಯನ್ನು ವಾಪಸ್ ಪಡೆದಿದೆ.
ಇದರಿಂದ ಲಸಿಕೆ ಪಡೆದವರಲ್ಲಿ ಆತಂಕ ಉಂಟಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಯೇ ಶಿಫಾರಸು ಮಾಡಿತ್ತು. ಈ ನಂಬಿಕೆಯಿಂದಾಗಿ ಜನರೂ ಲಸಿಕೆ ಪಡೆದಿದ್ದರು. ಆದರೆ ಈಗ ಈ ಲಸಿಕೆ ಜೀವಕ್ಕೆ ಅಪಾಯಕಾರಿ ಎನ್ನಲಾಗುತ್ತಿದೆ.
ದೇಶದ ಶೇ.70ರಷ್ಟು ಮಂದಿ ಕೋವಿಶೀಲ್ಡ್ ಲಸಿಕೆಯನ್ನೇ ಪಡೆದಿದ್ದಾರೆ. ಒಂದು ವೇಳೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಅದಕ್ಕೆ ಯಾರು ಹೊಣೆ? ವಿಶ್ವ ಆರೋಗ್ಯ ಸಂಸ್ಥೆಯೇ ಈ ಲಸಿಕೆಯನ್ನು ಶಿಫಾರಸು ಮಾಡಿದ್ದರಿಂದ ಜನರ ಪ್ರಾಣಕ್ಕೆ ಅಪಾಯವಾದರೆ ಅದರ ಜವಾಬ್ದಾರಿಯನ್ನು ವಿಶ್ವಸಂಸ್ಥೆಯೇ ಹೊರಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.