Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಓದುಗರ ಪತ್ರ: ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ?

ಆಗಸ್ಟ್ 27ರಂದು ನಡೆದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರ ಮಾಡಿದ್ದ ಪ್ರಶ್ನೆಗಳ ಪೈಕಿ ಕೆಲವು ಪ್ರಶ್ನೆಗಳು ತಪ್ಪಾಗಿ ತರ್ಜುಮೆಗೊಂಡಿದ್ದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿ ಸರಿಯಾಗಿ ಉತ್ತರ ಬರೆಯಲಾಗಲಿಲ್ಲ. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ವಿತರಿಸದೆ ನಿರ್ಲಕ್ಷ ತೋರಲಾಗಿದೆ. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ಸಮಯ ವ್ಯರ್ಥ ಮಾಡಿರುವುದೂ ಬೆಳಕಿಗೆ ಬಂದಿದ್ದು, ಕೆಲ ಅಭ್ಯರ್ಥಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೆಪಿಸಿಸಿ ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳು ಹಗಲು-ರಾತ್ರಿ ಎನ್ನದೇ ಶ್ರಮಿಸಿರುತ್ತಾರೆ. ನೂರಾರು ಕಿ.ಮೀ. ಪ್ರಯಾಣಿಸಿ ಪರೀಕ್ಷಾ ಕೇಂದ್ರಗಳಿಗೆ ಬರುತ್ತಾರೆ. ಇಂತಹ ಪರೀಕ್ಷೆಗಳನ್ನು ನಡೆಸುವಾಗ ಪರೀಕ್ಷಾ ಪ್ರಾಧಿಕಾರವು ಎಚ್ಚರಿಕೆ ಯಿಂದಿರಬೇಕು. ಏಕೆಂದರೆ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದ ಇಂತಹ ತಪ್ಪುಗಳು ಲಕ್ಷಾಂತರ ಅಭ್ಯರ್ಥಿಗಳ ಕನಸನ್ನು ನುಚ್ಚು ನೂರಾಗಿಸಬಹುದು. ಆದ್ದರಿಂದ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು.
-ಜಿ.ಎನ್.ಕಾರ್ತಿಕ್, ಪರೀಕ್ಷೆ ಬರೆದ ಅಭ್ಯರ್ಥಿ, ಗುಂಡ್ಲುಪೇಟೆ ತಾ.

Tags: