ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು ವರ್ಷಗಳಿಂದಲೂ ಪ್ರತಿಯೊಬ್ಬ ಉದ್ಯೋಗ ಆಕಾಂಕ್ಷಿಯನ್ನೂ ಕಾಡುತ್ತಿರುವ ಪ್ರಶ್ನೆ. ಸರ್ಕಾರಗಳು ಇಂತಹ ನಿರೀಕ್ಷೆಗಳಿಗೆ ಸ್ಪಂದಿಸುತ್ತಿಲ್ಲ. ದಿನಗಳು ಉರುಳಿದಂತೆ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ಜವಾಬ್ದಾರಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವವರು ಮತ್ತು ಉದ್ಯೋಗ ಆಕಾಂಕ್ಷಿಗಳ ಬೆನ್ನು ಹತ್ತುತ್ತವೆ. ಶಿಕ್ಷಿತ ಯುವ ಜನಾಂಗ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನದ ಹಾದಿಯಲ್ಲಿ ತಾಳ್ಮೆಯಿಂದ ಇದ್ದರೂ ಸರ್ಕಾರಗಳ ಕೆಲವು ಅವೈಜ್ಞಾನಿಕ ನಿರ್ಧಾರಗಳಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಉದ್ಯೋಗ ಆಕಾಂಕ್ಷಿಗಳ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಬದುಕಲ್ಲಿ ಗೆದ್ದವರನ್ನಷ್ಟೇ ಗೌರವಿಸುವ ಮನಸ್ಥಿತಿ ನಮ್ಮದಾಗಿದೆ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಇನ್ನೆಷ್ಟು ಕಾಲ ಮೌನ ವಹಿಸಲಿದೆ ? ಸರ್ಕಾರ ಇನ್ನಾದರೂ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದರಲ್ಲಿ ಬದ್ಧತೆಯನ್ನು ತೋರಬೇಕಿದೆ.
– -ಪವನ್ ಜಯರಾಂ. ಸಿದ್ದಯ್ಯನಪುರ, ಚಾಮರಾಜನಗರ





