೬೦ರ ದಶಕದ ಸಿನಿಮಾರಂಗ ಯಾವ ಗಲಾಟೆ ಇಲ್ಲದೆ ಸಾಗಿತ್ತು. ರಾಜಕುಮಾರ್ ಅವರ ಸಮಕಾಲಿನ ನಟರಾದ ಕಲ್ಯಾಣ್ ಕುಮಾರ್, ಶ್ರೀನಾಥ್, ನರಸಿಂಹರಾಜು, ದ್ವಾರಕೀಶ್, ರಾಜೇಶ್,. ವಜ್ರಮುನಿ, ಅಶ್ವತ್ಥ್ ಮೊದಲಾದ ನಟರು ಗುಂಪುಗಳಾಗಿ ಬೇರ್ಪಟ್ಟಿರಲಿಲ್ಲ. ಆ ದಿನ ಯಾವ ನಟರ ಸಿನಿಮಾಗಳು ಗೆದ್ದರೂ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತಿದ್ದರು.
ಡಾ.ರಾಜಕುಮಾರ್ ಅಭಿನಯಿಸಿದ ಸಿನಿಮಾಗಳೆಲ್ಲ ೧೦೦ ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನವಾಗುತ್ತಿತ್ತು. ಆಗ ಅಲ್ಲಿ ಸ್ನೇಹ ಪ್ರೀತಿ ವಿಶ್ವಾಸ ಎಲ್ಲೆಡೆ ಮನೆ ಮಾಡಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಲವಾರು ನಟರು ಗುಂಪುಗಳಾಗಿ ಬೇರ್ಪಟ್ಟಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಸ್ವಾರ್ಥದಿಂದ ನನ್ನ ಸಿನಿಮಾ ಮಾತ್ರ ಗೆಲ್ಲಬೇಕು, ಬೇರೆಯವರ ಸಿನಿಮಾ ಗೆಲ್ಲಬಾರದು ಎಂಬ ಅಸೂಯೆ ಮನೆ ಮಾಡಿದೆ. ಈ ದ್ವೇಷ ಸಾಧನೆ ಇದೇ ರೀತಿ ಮುಂದುವರಿದರೆ ಸಿನಿಮಾ ರಂಗದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಚಿತ್ರ ಚೆನ್ನಾಗಿದ್ದರೆ ಗೆಲ್ಲುತ್ತದೆ. ಹೀಗೆ ಜಗಳ ದ್ವೇಷ ಮಾಡಿ ನೆಚ್ಚಿನ ನಟರ ಅಭಿಮಾನಿಗಳ ಮನಸ್ಸನ್ನು ನೋಯಿಸಬೇಡಿ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಲಿ. ಇದು ಸಿನಿಮಾ ರಂಗದ ಮೇಲೂ ಪರಿಣಾಮ ಬೀರುತ್ತದೆ.
-ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು





