ಯುದ್ಧ ವಿನಾಶಕಾರಿ!
ನಿಲ್ಲುವಂತೆ ಕಾಣುವುದಿಲ್ಲ
ಕೊಲ್ಲಿ ರಾಷ್ಟ್ರಗಳ ಸಂಘರ್ಷ!
ಬದಲಿಗೆ ವಿಸ್ತರಿಸಿರುವುದು
ನೋವು ಸಂಕಟದ ಸಂಗತಿ!
ಗೆಲ್ಲಲಾಗದು ದ್ವೇಷದಲಿ ಯಾರನ್ನೂ
ಪ್ರೀತಿ ಸೋದರತೆ ಕಾರುಣ್ಯ
ಜಗದೇಳ್ಗೆಯ ಸಂಜೀವಿನಿ!
ಯುದ್ಧ ವಿನಾಶಕಾರಿ ಎಂದಿಗೂ
ಅರಿತು ನಡೆಯಬೇಕು ಜಗನಾಯಕರು!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ಮೈಸೂರು





