ವೈಕಂ ಚಳವಳಿಯು ಅಸ್ಪೃಶ್ಯತೆ ಆಚರಣೆ ವಿರೋಧಿಸಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟ. ಇದರ ನೆನಪಿನಲ್ಲಿ ತಮಿಳುನಾಡು ಸರ್ಕಾರ ‘ವೈಕಂ ಪ್ರಶಸ್ತಿ’ ಸ್ಥಾಪಿಸಿದೆ. ಪ್ರಥಮ ವರ್ಷದ ಪ್ರಶಸ್ತಿಗೆ ಸಾಹಿತಿ ದೇವನೂರ ಮಹಾದೇವ ಅವರು ಭಾಜನರಾಗಿರುವುದು ಶ್ಲಾಘನೀಯ ಸಂಗತಿ.
ವೈಕಂ ಹೋರಾಟ ನಡೆದು ನೂರು ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿರುವುದು, ಅದನ್ನು ಮೊದಲಿಗೆ ದೇವನೂರರಿಗೆ ಪ್ರದಾನ ಮಾಡಿರುವುದು ತಮಿಳುನಾಡು ಸರ್ಕಾರದ ಮಾದರಿ ನಡೆಯಾಗಿದೆ.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.





