ಆಡುವ ಮಾತು ಹೇಗಿರಬೇಕೆಂಬುದನ್ನು ಕುರಿತ ಬಸವಣ್ಣನವರ ‘ವಚನ’ವೊಂದು ಪ್ರಸಿದ್ಧವಾಗಿದೆ. ಅದರ ಅಂತ್ಯದಲ್ಲಿ ಅವರು ಹೇಳುತ್ತಾರೆ, ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು!’ ಎಂದು, ಶಿಖರ ಸದೃಶವಾಗಿ!
ಮುತ್ತಿನ ಹಾರ, ಮಾಣಿಕ್ಯದ ದೀಪ್ತಿ, ಸ್ಛಟಿಕದ ಶಲಾಕೆ ಹಾಗಿರಲಿ (ಬೇಡವೆಂದಲ್ಲ). ಇನ್ನೊಂದು ದೃಷ್ಟಿಯಿಂದ ಮಾತು ಪ್ರಭು ಸಂಮಿತ, ಮಿತ್ರ ಸಂಮಿತ, ಕಾಂತಾ ಸಂಮಿತಗಳಿಗಿಂತ ಮಿಗಿಲಾಗಿ ‘ಲಿಂಗಸಂಮಿತ’ (ಸಮ್ಮತ) ಆಗಿರಬೇಕು. ಆಗ ಅದಕ್ಕೆ (ಶಿವ) ಮೌಲ್ಯ, ಸಾರ್ಥಕತೆ! ಈ ಲಕ್ಷಣಕ್ಕೆ ಬಸವ ನುಡಿಗಣವೆ ಲಕ್ಷ್ಯವಾಗಿದೆ! (ಒಟ್ಟಿನಲ್ಲಿ ಶರಣ ವಾಣಿ ಕೂಡ).
-ಸಿಪಿಕೆ, ಮೈಸೂರು





