ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಈ ಟ್ಯಾಂಕ್‌ನಲ್ಲಿ ನಿತ್ಯ ನೀರು ತುಂಬಿ ಹರಿಯುತ್ತಿದ್ದು ನೀರು ನಿಲ್ಲಿಸಲು ಯಾವುದೇ ವ್ಯವಸ್ಥೆ ಇಲ್ಲ ಇದರಿಂದಾಗಿ ನೀರು ಸೋರಿಕೆಯಾಗುತ್ತಿದ್ದು, ಟ್ಯಾಂಕ್ ಸುತ್ತ ಪಾಚಿ ಬೆಳೆದುಕೊಂಡಿದೆ. ಅಲ್ಲದೆ ಟ್ಯಾಂಕ್‌ನ ಸುತ್ತಲೂ ನೀರು ನಿಂತಿದ್ದು, ದುರ್ವಾಸನೆ ಬೀರಲಾರಂಭಿಸಿದೆ. ಇಷ್ಟಿದ್ದರೂ ಜನರು ವಿಧಿ ಇಲ್ಲದ ಈ ಅಶುದ್ಧ ನೀರನ್ನೇ ಬಳಸಬೇಕಾಗಿದೆ.
ಇಂತಹ ಟ್ಯಾಂಕನ್ನು ಸ್ವಚ್ಛವಾಗಿಟ್ಟು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಾದದ್ದು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕರ್ತವ್ಯ. ಆದರೆ ಅಧಿಕಾರಿಗಳು ನೀರಿನ ಟ್ಯಾಂಕನ್ನು ಸರಿಪಡಿಸುವುದಕ್ಕಾಗಲಿ, ಅದರ ಸುತ್ತಲು ಸ್ವಚ್ಛತೆ ಕಾವಾಡುವುದಕ್ಕೂ ಮುಂದಾಗಿಲ್ಲ. ಇನ್ನು ಮುಂದಾದರೂ ಗ್ರಾಮ ಪಂಚಾಯಿಯವರು ಟ್ಯಾಂಕನ್ನು ಸ್ವಚ್ಛಗೊಳಿಸಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಬೇಕಿದೆ.
-ಎನ್.ಆರ್.ಚೇತನ್, ನಂಜನಗೂಡು ತಾ