ಭಾರತದ ಮೇಲೆ ೨೪ ತಾಸಿನಲ್ಲಿ ಇನ್ನಷ್ಟು ಸುಂಕ ಹೇರುವುದಾಗಿ ಬೆದರಿಕೆ ತಂತ್ರ ಹೂಡಿ ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ಪ್ರಶ್ನಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ರವರ ನಡೆ ಖಂಡನೀಯ. ಸಾರ್ವಭೌಮ ರಾಷ್ಟ್ರಗಳು ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿವೆ. ಈ ನಿಟ್ಟಿನಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಅಮೆರಿಕ ಯಾವ ನೈತಿಕತೆಯನ್ನೂ ಹೊಂದಿಲ್ಲ.
ಹೀಗಾಗಿ ಭಾರತದ ಮೇಲೆ ಟ್ರಂಪ್‌ರವರ ಸುಂಕ ಬೆದರಿಕೆ ಅಸಮರ್ಥನೀಯ ಹಾಗೂ ಆಕ್ಷೇಪಾರ್ಹ. ಭಾರತ ಕೂಡ ಟ್ರಂಪ್‌ರವರ ಸುಂಕ ಬೆದರಿಕೆಗೆ ಸೊಪ್ಪು ಹಾಕದೆ ದೇಶದ ಆರ್ಥಿಕ ಭದ್ರತೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಏನೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತವು ಮುಂದಿಡುವ ಹೆಜ್ಜೆಗಳಿಗೆ ನಾವೆಲ್ಲರೂ ಸ್ಪಂದಿಸುವ ಹಾಗೂ ಬೆಂಬಲಿಸುವ ಅಗತ್ಯತೆ ಇದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





