Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಓದುಗರ ಪತ್ರ:  ತಂಬಾಕು ಉತ್ಪನ್ನ  ಸೆಸ್: ಕಠಿಣ ಕ್ರಮ ಅಗತ್ಯ

ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕ್ರಮ ಸ್ವಾಗತಾರ್ಹ . ಇದರೊಂದಿಗೆ ಇನ್ನೂ ಹೆಚ್ಚಿನ ಕ್ರಮಗಳ ಅವಶ್ಯಕತೆ ಇದೆ. ದೇಶದಲ್ಲಿ ಜನಸಂಖ್ಯೆಯ ಶೇ.೧೦ಕ್ಕಿಂತಲೂ ಹೆಚ್ಚು ಜನರು ಹೊಗೆ ರಹಿತ ತಂಬಾಕು ಸೇವನೆ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ

ಪ್ರತಿವರ್ಷ ಸುಮಾರು ೩.೭ ಲಕ್ಷ ಮಂದಿ ಬಾಯಿ ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿರುವುದು ಗಂಭೀರ ಪರಿಸ್ಥಿತಿಯನ್ನು ತೋರುತ್ತದೆ. ಉತ್ಪಾದನಾ ಸಾಮರ್ಥ್ಯಕ್ಕೆ ತೆರಿಗೆ ವಿಧಿಸುವ ಮೂಲಕ ಬಳಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಕಠಿಣ ನಿಯಂತ್ರಣ, ಜಾಹೀರಾತು ನಿಷೇಧ, ಮತ್ತು ವ್ಯಸನ ವಿಮೋಚನೆ ಕಾರ್ಯಕ್ರಮಗಳಿಲ್ಲದೆ ನಿಜವಾದ ಪರಿಣಾಮ ಕಷ್ಟ ಸಾಧ್ಯ. ರಾಜ್ಯಗಳು ಈ ಸೆಸ್‌ನಿಂದ ತಮ್ಮ ಪಾಲಿಗೆ ಬರುವ ಆದಾಯವನ್ನು ಪಾರದರ್ಶಕವಾಗಿ ಕ್ಯಾನ್ಸರ್ ತಪಾಸಣೆ, ಗ್ರಾಮೀಣ ಭಾಗದ ಜನರ ಆರೋಗ್ಯ ಜಾಗೃತಿ, ಮತ್ತು ವ್ಯಸನ ನಿರ್ಮೂಲನಾ ಕೇಂದ್ರಗಳಿಗೆ ಬಳಸಬೇಕು.

-ಡಾ. ಎಚ್.ಕೆ. ವಿಜಯಕುಮಾರ, ಬೆಂಗಳೂರು

Tags:
error: Content is protected !!