Mysore
22
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಓದುಗರ ಪತ್ರ: ಮಂಗನ ಕೈಗೆ ……….

ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ ಹಿಡಿತದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿ   ತಮ್ಮ ಸೇನಾ ಪಡೆಯನ್ನು ನಿಯೋಜಿಸಲು ತಿರಸ್ಕರಿಸಿರುವುದು ಅಮೆರಿಕಾದ ಅಧಕ್ಷ ಡೊನಾಲ್ಡ್ ಟ್ರಂಪ್‌ಗೆ ಉಂಟಾಗಿರುವ ದೊಡ್ಡ ಮುಖಭಂಗವಾಗಿದೆ. ಯುದ್ಧ ಮುಂದುವರಿದಂತೆಲ್ಲ, ಅಮೆರಿಕಾ ನಿಯಂತ್ರಣ ಸಡಿಲಗೊಳ್ಳುತ್ತಿರುವುದು, ಟ್ರಂಪ್‌ನ ಅಟ್ಟಹಾಸಕ್ಕೆ ಬಿದ್ದಿರುವ ಮತ್ತೊಂದು ಕೊಡಲಿ ಪೆಟ್ಟಾಗಿದೆ. ಕೊಲ್ಲಿ ಪ್ರದೇಶದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಪುಟ್ಟ ಯಹೂದಿ ರಾಷ್ಟ್ರ ಇಸ್ರೇಲ್ ಜೊತೆ ಸೇರಿಕೊಂಡು ಕಳೆದ ಹಲವಾರು ದಿನಗಳಿಂದ ಇರಾನ್ ಮೇಲೆ ದಾಳಿ ನಡೆಸುತ್ತಾ,  ಸಹಸ್ರಾರು ಜನರ ಮಾರಣ ಹೋಮಕ್ಕೆ ಕಾರಣವಾಗಿ,   ಇಡೀ ವಿಶ್ವಕ್ಕೆ ಆತಂಕವನ್ನು ತಂದಿಟ್ಟಿರುವ ಡೊನಾಲ್ಡ್ ಟ್ರಂಪ್ರವರ ಹುಚ್ಚುತನಕ್ಕೆ ಈಗ ಅಮೆರಿಕನ್ನರೇ ತಿರುಗಿಬಿದ್ದಿದ್ದಾರೆ.   ಟ್ರಂಪ್ ರಂತಹ ಹುಂಬನ ಕೈಗೆ ಅಽಕಾರ ಕೊಟ್ಟರೆ, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗುತ್ತದೆ ಎಂಬುದಕ್ಕೆ ಈ ಯುದ್ಧವೇ ಸಾಕ್ಷಿಯಾಗಿದೆ.   ಯುದ್ಧದಿಂದ ಮುಂದೆ ಉಂಟಾಗಬಹುದಾದ ಮತ್ತಷ್ಟು ಹಾನಿಯನ್ನು ತಡೆಗಟ್ಟಲು, ಅಮೆರಿಕಾದ ಈ ಹುಚ್ಚು ದೊರೆ ಈಗಲಾದರೂ ಮುಂದಾಗದಿದ್ದದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

 

Tags:
error: Content is protected !!