ಹಲವು ವರ್ಷಗಳಿಂದ ಹುಡುಕಿದರೂ ಮದುವೆಯಾಗಲು ಹೆಣ್ಣುಸಿಗಲಿಲ್ಲವೆಂಬ ಜುಗುಪ್ಸೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಾವು ನ್ಯಾಯವಲ್ಲ.
ವೈವಾಹಿಕ ಜೀವನದ ಸಂಕಷ್ಟಗಳಿಂದ ನೊಂದು-ಬೆಂದು ಆತ್ಮಹತ್ಯೆ ದಾರಿ ಹಿಡಿಯುವ ವರ್ಗ ಒಂದೆಡೆಯಾದರೆ,ಮತ್ತೊಂದೆಡೆ ಮದುವೆಯಾಗುತ್ತಿಲ್ಲವಲ್ಲ ಎಂದು ಕೊರಗಿ ಸಾಯುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದುಆತಂಕಕ್ಕೆ ಕಾರಣವಾಗಿದೆ.‘ಮದುವೆಯಾಗುವವರೆಗೂ ಹುಚ್ಚು ಬಿಡೊಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗೊಲ್ಲಾ‘ ಅನ್ನುವ ಹಾಗೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಯುವಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಹೆಣ್ಣು ಸಿಗುತ್ತಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ.
ಇದರಿಂದಾಗಿ ಯುವಕರಿಗೆ ಮದುವೆ ಎಂಬುದು ಆತ್ಮ ಹತ್ಯೆಗೆ ಹೊಸ ಮಾರ್ಗವೊಂದನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಇಂತಹ ಪ್ರಕರಣಗಳು ಗಂಭೀರವಾಗಿದ್ದು, ಇವುಗಳ ಬಗ್ಗೆ ಎಲ್ಲರೂ ಆಲೋಚಿಸಬೇಕಿದೆ.
-ಕೆ.ವಿ.ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.





