Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಓದುಗರ ಪತ್ರ: ಮಹಿಳೆ ವಿವಸ ಪ್ರಕರಣ ತನಿಖೆಯಲ್ಲಿ ಪೂರ್ವಗ್ರಹ ಬೇಡ

dgp murder case

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ ಪ್ರಕರಣ ಅತ್ಯಂತ ಅಮಾನವೀಯವಾದುದು. ಸಂತ್ರಸ್ತ ಮಹಿಳೆ ಬಿಜೆಪಿಯೋ, ಕಾಂಗ್ರೆಸ್ಸೋ ಎನ್ನುವುದು ನಂತರದ ವಿಚಾರ. ಮೊದಲಿಗೆ ಆಕೆ ಮಹಿಳೆ ಎಂಬುದನ್ನು ಮಾನವೀಯ ನೆಲೆಯಲ್ಲಿ ನೋಡಬೇಕು. ಸುತ್ತಲೂ ಮಹಿಳಾ ಪೊಲೀಸರೇ ಇದ್ದರೂ ಅದು ಹೇಗೆ ಇಂತಹ ಅವಾಂತರ ನಡೆಯಿತು? ಪೊಲೀಸ್ ವಾಹನವನ್ನು ಹತ್ತಿಸುವ ಮೊದಲೇ ಆಕೆಯ ವರ್ತನೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದರೆ, ಪೊಲೀಸರಿಗೆ ವಿವಸದ ಸೂಚನೆ ಸಿಗುತ್ತಿತ್ತು ಅನಿಸುತ್ತದೆ.

ಅದೇನೇ ಇರಲಿ ಪ್ರಕರಣ ನಡೆದುಹೋಗಿದೆ. ಯಾವುದೇ ರಾಜಕೀಯ ಪಕ್ಷ ಇದನ್ನು ಸ್ವಾರ್ಥಕ್ಕಾಗಿ ಬಳಸದೇ ಆ ಮಹಿಳೆಗೆ ನ್ಯಾಯ ಒದಗಿಸಲು ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣವನ್ನು ದಾಖಲಿಸಿಕೊಂಡಿದೆ ಎನ್ನಲಾಗಿದೆ. ಇದರಲ್ಲಿ ಪೂರ್ವಗ್ರಹ ಇಲ್ಲದೆ ತನಿಖೆ ನಡೆಸಲಿ. ತಪ್ಪಿತಸ್ಥರಿಗೆ ಮಾತ್ರವೇ ಶಿಕ್ಷೆಯಾಗಲಿ. ಅದರ ಹೊರತಾಗಿ ಅಮಾಯಕರನ್ನು ಇಲ್ಲಿ ಶಿಕ್ಷಿಸುವುದು ಸರಿಯಲ್ಲ.

-ಜಿ.ಎಂ.ಮಾನ್ಯತಾ, ಸರಸ್ವತಿಪುರಂ, ಮೈಸೂರು

Tags:
error: Content is protected !!