ಮೈಸೂರಿನ ಲಿಂಗದೇವರಕೊಪ್ಪಲು ಗ್ರಾಮದಲ್ಲಿರುವ ಗಾರ್ಮೆಂಟ್ಸ್, ಕಾರ್ಖಾನೆಗಳಿಗೆ ಸುತ್ತಮುತ್ತಲಿನ ಕಾರ್ಮಿಕರು ಬರುತ್ತಾರೆ. ಆದರೆ ಈ ಸ್ಥಳದಲ್ಲಿ ಮೈಸೂರಿನಿಂದ ಮಡಿಕೇರಿ, ಹಾಸನ ಕಡೆಗೆ ತೆರಳುವ ಕರ್ನಾಟಕ ಸಾರಿಗೆ ಬಸ್‌ಗಳನ್ನು ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ.
ಮೈಸೂರಿನ ಸಬ್ ಅರ್ಬನ್ ನಿಲ್ದಾಣದಿಂದ ಹೊರಡುವ ಸಾರಿಗೆ ನಿಗಮದ ಬಸ್‌ಗಳು ರಾಮಸ್ವಾಮಿ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಪಡುವಾರಹಳ್ಳಿ, ಬಿ. ಎಂ.ಆಸ್ಪತ್ರೆ, ಹಿನಕಲ್, ಹೂಟಗಳ್ಳಿ, ಬೆಳವಾಡಿ ನಂತರ ಮತ್ತೆ ಈ ಬಸ್ ಗಳು ನಿಲ್ಲುವುದು ಇಲವಾಲದಲ್ಲಿ. ಬೆಳವಾಡಿ ಹಾಗೂ ಇಲವಾಲದ ಮಧ್ಯೆ ಇರುವ ಲಿಂಗದೇವರಕೊಪ್ಪಲು ಗ್ರಾಮದಲ್ಲಿ ಸಾರಿಗೆ ನಿಗಮದ ಬಸ್‌ಗಳು ನಿಲ್ಲುತ್ತಿಲ್ಲ. ಈ ಗ್ರಾಮದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ, ಗೋಕುಲ್ ದಾಸ್ ಹಾಗೂ ಶಾಹಿ ಎಕ್ಸ್‌ಪೋರ್ಟ್‌ನ ಗಾರ್ಮೆಂಟ್ಸ್ ಗಳ ಮಹಿಳಾ ಹಾಗೂ ಪುರುಷ ನೌಕರರು ಹಾಗೂ ಇತರ ಪ್ರಯಾಣಿಕರು ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಅಲ್ಲದೇ ಇದೇ ಗ್ರಾಮದ ಅನತಿ ದೂರದಲ್ಲಿ ನಂಜಮ್ಮ ಜವರೇಗೌಡ ಆಸ್ಪತ್ರೆಗೆ ಬರುವ ರೋಗಿಗಳು ಅವರ ಪಾಲಕರು, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‌ಗೆ ಬರುವ ವಿದ್ಯಾರ್ಥಿಗಳು ಅವರ ಪೋಷಕರು, ವಿನಾಯಕ ಗಾರ್ಡನ್ ಸಿಟಿಯ ನಿವಾಸಿಗಳು ಅವರ ಸಂಬಂಧಿಕರು ಇಲ್ಲಿಗೆ ಬರುತ್ತಾರೆ. ಆದ್ದರಿಂದ ಸಾರಿಗೆ ನಿಗಮದ ಮೈಸೂರು ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಲಿಂಗದೇವರ ಕೊಪ್ಪಲು ಗ್ರಾಮದಲ್ಲಿ ಸಾರಿಗೆ ನಿಗಮದ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು.
-ಮಂಜುನಾಥ್, ಲಿಂಗದೇವರುಕೊಪ್ಪಲು, ಮೈಸೂರು



