Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ: ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ

ಇವಿಎಂ ಬದಲು ಬ್ಯಾಲೆಟ್ ಪೇpರ್‌ಗಳ ಮೂಲಕ ಮತದಾನ ಮಾಡುವ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿರುವುದು ಸ್ವಾಗತಾರ್ಹ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಲಿದೆ.

‘ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ಒಪ್ಪಿಕೊಳ್ಳುತ್ತಾರೆ. ಸೋತವರು ಇವಿಎಂಗಳಲ್ಲಿ ದೋಷವಿದೆ ಎಂದು ಆರೋಪಿಸುತ್ತಾರೆ. ಸೋತಾಗ ಆರೋಪಿಸುವುದು ಸಾಮಾನ್ಯ. ಹೀಗಾಗಿ ಇಂಥ ವಾದಗಳನ್ನು ಮಂಡಿಸಲು ಇದು ಸೂಕ್ತ ಜಾಗ ಅಲ್ಲ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿರುವುದು ಪ್ರಶಂಸನೀಯ.

ಚುನಾವಣೆಗಳಲ್ಲಿನ ತಾಂತ್ರಿಕ ವ್ಯವಸ್ಥೆಗಳ ಭದ್ರತೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರಲ್ಲಿ ಎದ್ದಿರುವ ಸಂದೇಹಗಳು ಹಾಸ್ಯಾಸ್ಪದ ಅನಿಸುತ್ತದೆ. ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದರೆ ಅದು ನ್ಯಾಯಯುತ ಸೋತರೆ ಇವಿಎಂನಲ್ಲಿ ದೋಷವಿದೆ ಎಂದು ಆರೋಪಿಸುತ್ತಾರೆ. ಇದು ಚುನಾವಣಾ ವ್ಯವಸ್ಥೆಯನ್ನೇ ಅನುಮಾನಿಸಿದಂತಾಗುತ್ತದೆ’ ಎಂದಿರುವ ಸುಪ್ರೀಂ ಕೋರ್ಟ್ ಇವಿಎಂ ಮೂಲಕವೇ ಚುನಾವಣೆಗಳನ್ನು ನಡೆಸುವುದನ್ನೇ ಮುಂದುವರಿಸಲು ಆದೇಶಿಸಿದ್ದು, ಈ ತೀರ್ಪು ಜನರಿಗೆ ಚುನಾವಣಾ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,

 

Tags: