Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಓದುಗರ ಪತ್ರ| ಅತ್ಯಾಚಾರಗಳಿಗೆ ಅಂತ್ಯ ಯಾವಾಗ?

ದೇಶದಲ್ಲಿ ಒಂದಲ್ಲಾ ಒಂದು ಕಡೆ ಅತ್ಯಾಚಾರದಂತಹ ಪ್ರಕರಣ ವರದಿ ಯಾಗುತ್ತಲೇ ಇದ್ದು, ಹೆಣ್ಣುಮಕ್ಕಳು ಮನೆಯಿಂದ ಹೊರಬರಲೂ ಆತಂಕಪಡುವಂತಾಗಿದೆ.

ಹೆಣ್ಣು ಮಕ್ಕಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅಪಹರಿಸುವುದು, ಕೆಲಸ ಮಾಡುವ ಸ್ಥಳಗಳಲ್ಲಿ, ಶಾಲೆಗಳಲ್ಲಿ ಅವರ ಮೇಲೆ ದೌರ್ಜನ್ಯವೆಸಗುವುದು, ಕಾಲೇಜು, ಪಿಜಿಗಳಿಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡುವ ಪ್ರಕರಣಗಳನ್ನು ನೋಡಿದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಮನೆ ಯಿಂದ ಹೊರಗೆ ಹೇಗೆ ಕಳುಹಿಸುವುದು ಎಂಬ ಚಿಂತೆ ಶುರುವಾಗಿದೆ.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸರ್ಕಾರ ಎಷ್ಟೇ ಕಾನೂನುಗಳನ್ನು ರೂಪಿಸಿದರೂ ಅತ್ಯಾಚಾರಗಳು ನಿಲ್ಲುತ್ತಿಲ್ಲ. ಮಹಿಳೆಯರು ಎಲ್ಲೇ ಹೋದರೂ ಅವರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಖಂಡಿತವಾಗಿಯೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸದ ಹೊರತಾಗಿ ಅತ್ಯಾಚಾರದಂತಹ ಅನಿಷ್ಟವನ್ನು ಕೊನೆಗಾಣಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದೇಶಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆಯ ಮಾದರಿಯಲ್ಲಿಯೇ ಭಾರತದಲ್ಲಿಯೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. –

ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು.

Tags:
error: Content is protected !!