Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ| ಕಾನೂನು ಬಿಗಿಗೊಳಿಸುವುದು ಅಗತ್ಯ

ಕೆಲದಿನಗಳ ಹಿಂದೆಯಷ್ಟೆ ಬೆಂಗಳೂರಿನ ಕೋರಮಂಗಲದ ಪಿಜಿಯೊಂದರಲ್ಲಿ ಯುವತಿಯನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿಯೇ ಅತ್ಯಾಚಾರದ ಪ್ರಕರಣವೊಂದು ವರದಿಯಾಗಿರುವುದು ಆತಂಕ ಮೂಡಿಸಿದೆ.

ಈ ಅತ್ಯಾಚಾರಿಗಳಿಗೆ ಮತ್ತು ಕೊಲೆಗಡುಕರಿಗೆ ಕಾನೂನಿನ ಭಯವಿಲ್ಲವೇನೋ ಅನಿಸುತ್ತದೆ. ಯಾವ ಅಂಜಿಕೆಯೂ ಇಲ್ಲದೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವುದು, ಅವರನ್ನು ಕೊಲೆ ಮಾಡುವ ದುಷ್ಕೃತ್ಯಗಳಿಗೆ ಇಳಿಯುತ್ತಿದ್ದಾರೆ. ನಗರ ಭಾಗಗಳಲ್ಲಿ ಇತ್ತೀಚೆಗೆ ನೈಟ್‌ಪಾರ್ಟಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕ-ಯುವತಿಯರು ಮಧ್ಯರಾತ್ರಿಯವರೆಗೂ ಮೋಜು ಮಸ್ತಿ ಮಾಡಿಕೊಂಡು, ಪಾನಮತ್ತರಾಗಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದಾಗಿಯೂ ಅಪರಾಧ ಪ್ರಕರಣಗಳು ಹೆಚ್ಚಾಗಬಹುದು.

ಅಲ್ಲದೆ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಗಾಂಜಾ, ಡ್ರಗ್ಸ್ ಸುಲಭವಾಗಿ ಯುವಸಮೂಹದ ಕೈ ಸೇರುತ್ತಿದೆ. ಅವುಗಳ ಸೇವನೆಯೂ ಇಂತಹ ದುಷ್ಕೃ ತ್ಯಗಳಿಗೆ ಪ್ರಚೋದಿಸಬಹುದು. ಆದ್ದರಿಂದ ಮೊದಲು ನಮ್ಮ ಕಾನೂನು-ವ್ಯವಸ್ಥೆ ಬದಲಾಗಬೇಕು. ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು. ರಾತ್ರಿಕೂಟಗಳನ್ನು ನಿರ್ಬಂಧಿಸುವ ಜತೆಗೆ ಗಾಂಜಾ, ಡ್ರಗ್ಸ್ ಸೇವನೆಗೆ ಕಡಿವಾಣ ಹಾಕಬೇಕು.

-ವಿಜಯ್ ಹೆಮ್ಮಿಗೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು.

Tags: