Mysore
16
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಓದುಗರ ಪತ್ರ:  ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ಕಲಿಸಿ

ಓದುಗರ ಪತ್ರ

ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ರವರು ಖಾಸಗಿ ಮನರಂಜನಾ ಟಿವಿ ಚಾನಲ್‌ನಲ್ಲಿ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ ಸೀಸನ್- ೧೭’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುಜರಾತ್ ರಾಜ್ಯದ ಗಾಂಧಿ ನಗರದ ಐದನೇ ತರಗತಿ ವಿದ್ಯಾರ್ಥಿ ಇಶಿತ್ ಭಟ್ ವರ್ತನೆ ಬೇಸರ ತರಿಸಿತು.

ಮೊದಲಿಗೆ ಅಮಿತಾಭ್ ಬಚ್ಚನ್‌ರವರು ಕಾರ್ಯಕ್ರಮದ ನಿಯಮಗಳನ್ನು ಹೇಳಲು ಪ್ರಾರಂಭಿಸಿದಾಗ ಈ ನಿಯಮಗಳನ್ನು ನನಗೆ ಹೇಳಬೇಡಿ, ನನಗೆ ಎಲ್ಲಾ ಗೊತ್ತು ಎಂದು ಅಸಡ್ಡೆಯಿಂದ ಉತ್ತರಿಸಿದ್ದಾನೆ. ಒಂದು ಪ್ರಶ್ನೆಯನ್ನು ಕೇಳಿ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲು ಪ್ರಾರಂಭಿಸಿದಾಗಲೂ ಅದೆಲ್ಲವೂ ಗೊತ್ತು ಎಂದು ಉಡಾ-ಯಿಂದ ಉತ್ತರಿಸಿದ್ದಾನೆ. ಕೊನೆಯ ಪ್ರಶ್ನೆಯಾದ ವಾಲ್ಮೀಕಿ ರಾಮಾಯಣದಲ್ಲಿ ಪ್ರಥಮ ಕಾಂಡ ಯಾವುದು ಎಂದು ಕೇಳಿದಾಗ ಆತ ಆಯ್ಕೆಗಳನ್ನು ನೀಡಿ ಎಂದು ಏರು ದನಿಯಲ್ಲಿ ಹೇಳಿ ಅಲವತ್ತುಕೊಂಡಿದ್ದಾನೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರಲ್ಲೂ ಅಮಿತಾಭ್ ಬಚ್ಚನ್‌ರಂತಹ ಹಿರಿಯ ನಟರ ಮುಂದೆ ಬಾಲಕನ ವರ್ತನೆ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಬಾಲಕನ ವರ್ತನೆ ನಿದರ್ಶನ .

ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಸಬೇಕು ಹಾಗೆಯೇ ತಪ್ಪು ಮಾಡಿದಾಗ, ಉದ್ಧಟತನದಿಂದ ವರ್ತಿಸಿದಾಗ ದಂಡಿಸಬೇಕು. ವಿದ್ಯೆಯ ಜತೆ ವಿನಯವನ್ನೂ ಕಲಿಸಿದಾಗ ಮಾತ್ರ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

-ಪುಂಡಲೀಕ ಲಮಾಣಿ, ಮೈಸೂರು

Tags:
error: Content is protected !!