Mysore
17
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಓದುಗರ ಪತ್ರ: ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಅಗತ್ಯ

ಓದುಗರ ಪತ್ರ

ಇತ್ತೀಚಿನ ದಿನಗಳಲ್ಲಿ ದೇವ್‌ ಪಾರ್ಟಿಯಂತಹ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸ್ಟಾರ್ ಹೋಟೆಲ್‌ಗಳು, ಪ್ರಭಾವಿಗಳ ಫಾರ್ಮ್ ಹೌಸ್‌ಗಳಲ್ಲಿ ನಡೆಯುತ್ತಿದ್ದ ಇಂತಹ ಪಾರ್ಟಿಗಳು ಈಗ ಮೈಸೂರಿನ ಕೆಆರ್ಎಸ್ ಹಿನೀರಿನ ಪ್ರದೇಶ ದಲ್ಲಿಯೂ ನಡೆದಿರುವುದು ಅಘಾತಕಾರಿ ಸಂಗತಿ. ಕ್ಷಣಿಕ ಸುಖ ಹಾಗೂ ಮತ್ತಿನ ಅಮಲಿಗೆ ಜೋಶು ಬಿದ್ದು, ಯುವಸಮೂಹ ಇಂತಹ ಪಾರ್ಟಿಗಳತ್ತ ವಾಲುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಆ‌ರ್ಎಸ್ ಹಿನ್ನೀರಿನ ಪ್ರದೇಶ ನಿರ್ಬಂಧಿತ ಪ್ರದೇಶವಾಗಿದ್ದರೂ ಇಲ್ಲಿ ಬಹಿರಂಗವಾಗಿಯೇ ಇಂತಹ ಮೋಜು-ಮಸ್ತಿಯ ಕೂಟಗಳು ಆಯೋಜನೆಯಾಗುತ್ತವೆ ಎಂದರೆ ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಹಿನ್ನೀರಿನ ಪ್ರದೇಶದಲ್ಲಿ ಇತ್ತೀಚೆಗೆ ಮದ್ಯವ್ಯಸನಿಗಳ ಹಾವಳಿಯೂ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಬೀಸಾಡುವುದು, ಕುಡಿದ ಅಮಲಿನಲ್ಲಿ ಈಜಲು ಹೋಗಿ ನೀರುಪಾಲಾಗಿರುವ ಸಾಕಷ್ಟು ಉದಾಹರಣೆಗಳಿವೆ. ಆದಾಗ್ಯೂ ಕೆಆರ್‌ಎಸ್‌ನಲ್ಲಿ ಸೆಕ್ಯುರಿಟಿಗಳನ್ನು ನಿಯೋಜಿಸುವುದಾಗಲಿ, ಪೊಲೀಸ್ ಇಲಾಖೆಯೇ ಆಗಾಗ್ಗೆ ಗಸ್ತು ತಿರುಗಿ ಇಂತಹ ಕೂಟಗಳಿಗೆ ಕಡಿವಾಣ ಹಾಕುವ ಕೆಲಸವನ್ನಾಗಲಿ ಮಾಡಿಲ್ಲ. ಇದರ ಪರಿಣಾಮ ಈಗ ರೇವ್‌ ಪಾರ್ಟಿಯಂತಹ ಕಾನೂನುಬಾಹಿರ ಚಟುವಟಿಕೆಗಳೂ ಇಲ್ಲಿ ನಡೆಯಲು ಆರಂಭಿಸಿವೆ. ಮುಂದಿನ ದಿನಗಳಲ್ಲಾದರೂ ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಕಆರ್‌ನ್‌ ಹಿನ್ನೀರಿನ ಪ್ರದೇಶದಲ್ಲಿ ಆಗಾಗ್ಗೆ ಮತ್ತು ಕಿರುಗುವ ಮೂಲಕ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಿ.
-ಪರಳಹಳ್ಳಿ ವುಟ್ಟರಾಜು, ತಾಂಡವವುರ

 

Tags:
error: Content is protected !!