ಜೆ.ಪಿ.ನಗರದ ಗೊಬ್ಬಳಿ ಮರ ತಂಗುದಾಣದ ಬಳಿ ಪ್ರತಿನಿತ್ಯ ಬೆಳಿಗ್ಗೆ ೮.೩೦ ರಿಂದ ೯.೩೦ ರವರೆಗಿನ ಅವಧಿಯಲ್ಲಿ ನಗರ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡದೇ ಇರುವುದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಮಾಸಿಕ ಪಾಸ್ ಪಡೆದಿದ್ದರು ಆಟೋದಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಮೈಸೂರು ನಗರ ಸಾರಿಗೆ ವಿಭಾಗದ ಅಧಿಕಾರಿಗಳು ಜೆ.ಪಿ.ನಗರದ ಗೊಬ್ಬಳಿ ಮರ ತಂಗುದಾಣದ ಬಳಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಕೆ. ಗಣೇಶ್ ಕುಮಾರ್, ಮೈಸೂರು





