Mysore
14
few clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಓದುಗರ ಪತ್ರ: ಆಧಾರರಹಿತ ಆರೋಪಗಳಿಗೆ ಕಡಿವಾಣ ಹಾಕಲಿ

dgp murder case

ನಮ್ಮ ಪಕ್ಷದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲು 1,200 ಕೋಟಿ ರೂ.ಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಆದರೆ ಅವರ ಆಸ ಈಡೇರುವುದಿಲ್ಲ, ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದ ಮುಖಂಡರೊಬ್ಬರ ಮೇಲೆಯೇ ಆರೋಪ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಆರೋಪ ಮಾಡಿರುವ ಯತ್ನಾಳ್‌ರವರು ಆ ಮುಖಂಡರು ಯಾರು ಎಂಬುದನ್ನು ಹೇಳಬಹುದಲ್ಲವೇ? ಎರಡು ವರ್ಷ ವರ್ಷಗಳ ಹಿಂದೆಯೂ ಯತ್ನಾಳ್‌ ಇಂತಹದ್ದೇ ಆರೋಪ ಮಾಡಿದ್ದರು. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು 2,000 ಕೋಟಿ ರೂ. ಹಾಗೂ ಮಂತ್ರಿಯಾಗಲು 100 ಕೋಟಿ ರೂ.ಗಳನ್ನು ಹೈಕಮಾಂಡ್‌ಗೆ ತಲುಪಿಸಬೇಕು ಎಂದು ಮಾಧ್ಯಮಗಳ ಮುಂದೆಯೇ ಹೇಳಿಕೆ ನೀಡಿದ್ದರು. ಹೀಗೆ ತಮ್ಮದೇ ಪಕ್ಷದ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಯತ್ನಾಳ್‌ರವರ ಧೈರ್ಯವನ್ನು ಮೆಚ್ಚಲೇಬೇಕು. ಆದರೆ ಇಂತಹ ಹೇಳಿಕೆಗಳು ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತವೆಯೇ ವಿನಾ ಅವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇಂತಹ ಆಧಾರರಹಿತ ಹೇಳಿಕೆಗಳು ಪಕ್ಷದ ಹಿನ್ನಡೆಗೆ ಕಾರಣವಾಗುತ್ತವೆಯಷ್ಟೆ. ಇಷ್ಟಿದ್ದರೂ ಹೈಕಮಾಂಡ್ ಯತ್ನಾಳ್‌ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಏಕೆ? ಇನ್ನಾದರೂ ಹೈಕಮಾಂಡ್ ಯತ್ನಾಳರ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಲಿ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು,

Tags:
error: Content is protected !!