Mysore
28
scattered clouds

Social Media

ಬುಧವಾರ, 01 ಏಪ್ರಿಲ 2026
Light
Dark

ಓದುಗರ ಪತ್ರ: ಎಸ್‌ಎಸ್‌ಎಲ್‌ಸಿ ಗಣಿತ ವಿಷಯಕ್ಕೆ ಕೃಪಾಂಕ ನೀಡಿ

ಓದುಗರ ಪತ್ರ

ಇತ್ತೀಚಿನ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಸುಮಾರು ೩೭ ಅಂಕಗಳ ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿರುವುದು ಅಥವಾ ಅತೀವ ಕ್ಲಿಷ್ಟಕರವಾಗಿರುವುದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ೧೬ ಅಂಕಗಳು ಪಠ್ಯದ ವ್ಯಾಪ್ತಿಯಲ್ಲೇ ಇರಲಿಲ್ಲ ಮತ್ತು ೨೧ ಅಂಕಗಳ ಅನ್ವಯಿಕ ಪ್ರಶ್ನೆಗಳು ಸಾಮಾನ್ಯ ವಿದ್ಯಾರ್ಥಿಗಳ ಪಾಲಿಗೆ ಮರೀಚಿಕೆಯಾಗಿದ್ದವು. ನಿಯಮದ ಪ್ರಕಾರ ಕಠಿಣ ಪ್ರಶ್ನೆಗಳು ಮಿತಿಯಲ್ಲಿರಬೇಕಿತ್ತು, ಆದರೆ ಇಲ್ಲಿ ಶೇ.೩೫ ಕ್ಕಿಂತ ಹೆಚ್ಚು ಕಠಿಣ ಪ್ರಶ್ನೆಗಳನ್ನು ನೀಡುವ ಮೂಲಕ ಮಂಡಳಿಯು ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಶಿಕ್ಷಣ ಇಲಾಖೆಯು ತಕ್ಷಣ ಎಚ್ಚೆತ್ತುಕೊಂಡು, ಈ ಗೊಂದಲಗಳಿಗೆ ಪ್ರಾಯಶ್ಚಿತ್ತವಾಗಿ ಕನಿಷ್ಠ ೧೬ರಿಂದ ೨೦ ಕೃಪಾಂಕಗಳನ್ನು ಘೋಷಿಸಬೇಕು.

– ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!