Mysore
22
haze

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಓದುಗರ ಪತ್ರ| ಟ್ರಾಫಿಕ್ ಸಮಸ್ಯೆ ತಪ್ಪಿಸಿ

ಮೈಸೂರಿನ ಪರಸಯ್ಯನಹುಂಡಿ ವರ್ತುಲ ರಸ್ತೆಯ ವೃತ್ತದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ.

ಈ ಜಂಕ್ಷನ್‌ನಲ್ಲಿ ವಾಹನ ಹೆಚ್ಚಾಗಿರುವುದರಿಂದ ಸಿಗ್ನಲ್ ಅಳವಡಿಸಲಾಗಿದೆ. ದಟ್ಟಣೆ ಆದರೆ ಎಚ್.ಡಿ.ಕೋಟೆ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್‌ಗಳು ಹಾಗೂ ಕೆಲ ಖಾಸಗಿ ವಾಹನಗಳು ಜನರನ್ನು ಹತ್ತಿಸಿಕೊಳ್ಳಲು ಸಿಗ್ನಲ್ ಪಕ್ಕದಲ್ಲೇ ನಿಲುಗಡೆ ನೀಡುತ್ತಿದ್ದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ.

ಅಲ್ಲದೆ ಕೆಲ ಖಾಸಗಿ ವಾಹನಗಳು ಜನರನ್ನು ಹತ್ತಿಸಿಕೊಳ್ಳುವ ಸಲುವಾಗಿ ಸಿಗ್ನಲ್ ಸಮೀಪವೇ ರಸ್ತೆಯಲ್ಲಿ ಹೆಚ್ಚು ಸಮಯ ನಿಂತಿರುತ್ತವೆ. ಇದರಿಂದ ಹಿಂದೆ ಬರುವ ವಾಹನಗಳು ಮುಂದೆ ಸಂಚರಿಸಲು ಪರದಾಡುವಂತಾಗುತ್ತದೆ. ಜತೆಗೆ ಈ ವೃತ್ತದಿಂದ 100 ಮೀ. ಅಂತರದಲ್ಲಿಯೇ ಪೊಲೀಸ್ ಚೆಕ್ ಪೋಸ್ಟ್ ಇದ್ದರೂ ಇಲ್ಲಿನ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಪೊಲೀಸ್ ಚೆಕ್ ಪೋಸ್ಟ್ ಸಮೀಪದಲ್ಲಿಯೇ ಬಸ್ ನಿಲ್ದಾಣ ನಿರ್ಮಿಸಿ ಅಲ್ಲಿಯೇ ನಿಲುಗಡೆ ನೀಡುವಂತೆ ಮಾಡಬೇಕಿದೆ. ಇದರಿಂದ ವಾಹನ ದಟ್ಟಣೆಯೂ ಕಡಿಮೆಯಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
-ಮಂಜೇಶ್ ದೇವಗಳ್ಳಿ, ಮೈಸೂರು.

Tags:
error: Content is protected !!