Mysore
22
few clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಓದುಗರ ಪತ್ರ: ಸರ್ವರ್ ಸಮಸ್ಯೆ ಬಗೆಹರಿಸಿ

ಓದುಗರ ಪತ್ರ

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗುತ್ತಿದ್ದು, ಪಡಿತರ ಪಡೆಯಲು ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ದಿನಪೂರ್ತಿ ನ್ಯಾಯಬೆಲೆ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಗ್ರಾಮೀಣ ಭಾಗಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವ‌ ಸಮಸ್ಯೆ ಹೆಚ್ಚಾಗಿದ್ದು, ಜನರು ಪಡಿತರ ಪಡೆಯಲು ನಿತ್ಯ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗ್ರಾಮೀಣ ಭಾಗದ ಬಹುತೇಕ ಜನರು ಕೂಲಿ ಕೆಲಸ, ಕೃಷಿಯನ್ನು ಆಧರಿಸಿ ಜೀವನ ಸಾಗಿಸುತ್ತಿದ್ದಾರೆ, ನಿತ್ಯ ದುಡಿದರೆ ಮಾತ್ರ ಅವರ ಜೀವನದ ಬಂಡಿ ಸಾಗುತ್ತದೆ.

ಹೀಗಾಗಿ ಬೆಳಿಗ್ಗೆಯೇ ಹೋಗಿ ಪಡಿತರ ತಂದು ನಂತರ ಕೆಲಸಕ್ಕೆ ಹೋಗುವ ಉದ್ದೇಶದಿಂದ ಅನೇಕ ಮಂದಿ ಬೆಳಿಗ್ಗೆ 8 ಗಂಟೆಗೇ ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲುತ್ತಾರೆ. ಆದರೆ ಇಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಅಕ್ಕಿ ಸಿಗುವುದು ತಡವಾಗುತ್ತಿದ್ದು, ಆ ದಿನದ ಕೆಲಸವನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಸಮಸ್ಯೆಯನ್ನು ಗಮನಹರಿಸಿ ಕೂಡಲೇ ಬಗೆಹರಿಸಬೇಕಿದೆ.

-ಕೆ.ಎಸ್.ಸುರೇಶ್, ಕೆ.ಜಿ.ಹಳ್ಳಿ, ಎಚ್.ಡಿ.ಕೋಟೆ ತಾ.

Tags:
error: Content is protected !!