Mysore
16
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ: ಸಿಜೆಐ ಮೇಲೆ ಶೂ ಎಸೆತ ಖಂಡನೀಯ

ಓದುಗರ ಪತ್ರ

ಸಂವಿಧಾನದ ಪ್ರಮುಖ ಅಂಗವಾಗಿರುವ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿದ್ದು ಸಂವಿಧಾನಕ್ಕೆ ತೋರಿದ ಅಗೌರವವಾಗಿದೆ. ಭಾರತ ಪವಿತ್ರ ಸಂವಿಧಾನವನ್ನು ಹೊಂದಿದ್ದು ಅನ್ಯದೇಶದವರೂ ನಮ್ಮ ಸಂವಿಧಾನವನ್ನು ಎರವಲು ಪಡೆಯುತ್ತಿದ್ದಾರೆ. ಹೀಗಿದ್ದರೂ ವಕೀಲನೊಬ್ಬ ಸುಪ್ರೀಂ ಕೋರ್ಟ್ ಕಲಾಪದ ವೇಳೆ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದು ಎಷ್ಟರಮಟ್ಟಿಗೆ ಸರಿ.

ಇಂತಹ ಅವಿವೇಕಿಗಳಿಂದ ದೇಶದ ಘನತೆ ಹಾಳಾಗುತ್ತಿದೆ. ಹಿರಿಯ ವಕೀಲನಿಂದ ಇಂತಹ ಕೃತ್ಯ ನಡೆದಿರುವುದು ಶೋಭೆ ತರುವಂತಹದ್ದಲ್ಲ. ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತೆಯಾಗಿ ಕೇಂದ್ರ ಸರ್ಕಾರ ಈತನನ್ನು ಗಡಿಪಾರು ಮಾಡಬೇಕು. ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಬೇಕು.

-ವಿಜಯ್ ಸೋನಿ, ವಿಜಯನಗರ, ಮೈಸೂರು

Tags:
error: Content is protected !!