ಮಾನವ ಘನತೆಗೆ ಕುಂದು!
ಹಳ್ಳಿಪಟ್ಟಣಗಳ ಕೆಲಕಡೆ
ಶೌಚಗುಂಡಿ ಒಳಚರಂಡಿಗಳನು
ನಮ್ಮ ಸಫಾಯಿ ಕರ್ಮಚಾರಿಗಳು
ಕೈಯಿಂದಲೇ ಸ್ವಚ್ಛಮಾಡುವುದು
ನೋವು ಸಂಕಟದ ಸಂಗತಿ
ಮಾನವ ಘನತೆ ಕುಗ್ಗಿಸುವ
ಅಮಾನವೀಯ ಪದ್ಧತಿ!
ಇಂಥಲ್ಲಿ ಕಾನೂನು ಕಟ್ಟಳೆ
ಸೋತಿರುವುದು ವಿಪರ್ಯಾಸ!
ಆಧುನಿಕತೆಯ ಭರಾಟೆಯಲಿ
ಕೈಬಳಕೆ ಚಾಲ್ತಿಯಲ್ಲಿರುವುದು
ಯಂತ್ರನಾಗರಿಕತೆಗೆ ಮಾನವ ಘನತೆಗೆ
ಬಹುದೊಡ್ಡ ಸವಾಲು, ಕುಂದು!
ಸರ್ಕಾರ ತಡೆಯಬೇಕಿದೆ
ಕಟ್ಟುನಿಟ್ಟಿನ ಕ್ರಮವಹಿಸಿ
ಯಂತ್ರೋಪಕರಣಗಳ ಬಳಸಿ!
– ಪ್ರೊ.ಸಿ.ಪಿ.ಸಿದ್ಧಾಶ್ರಮ, ವಿಜಯನಗರ,ಮೈಸೂರು





