Mysore
21
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಓದುಗರ ಪತ್ರ: ರಕ್ತ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿ

ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲಿಯೂ ಅಪಘಾತವಾದಾಗಲಂತೂ ರಕ್ತ ಬೇಕಾದಲ್ಲಿ ಗಾಯಾಳುಗಳ ಪರದಾಟ ಹೇಳತೀರದು.

ಎಚ್.ಡಿ.ಕೋಟೆ ತಾಲ್ಲೂಕನ್ನು ಆಡಳಿತಾತ್ಮಕ ದೃಷ್ಟಿಯಿಂದ ಸರಗೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳಾಗಿ ವಿಭಾಗಿಸಲಾಗಿದೆ. ಆದರೆ, ಈ ಎರಡೂ ತಾಲ್ಲೂಕುಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಸಿಗದಿರುವ ಜತೆಗೆ ಎಲ್ಲಿಯೂ ರಕ್ತ ಸಂಗ್ರಹಣೆ ಕೇಂದ್ರವಿಲ್ಲದಿರುವ ಪರಿಣಾಮ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ಪರದಾಡುವಂತಾಗಿದೆ. ಅಪಘಾತ ಮಾತ್ರವಲ್ಲದೆ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯವಿದ್ದರೆ ಅವರನ್ನು ಮೈಸೂರಿಗೆ ರವಾನಿಸಬೇಕಿದೆ. ತೀರ ಅನಿವಾರ್ಯವಾಗಿ ರಕ್ತ ಬೇಕಾದಾಗ ರಕ್ತ ಸಿಗದೆ ಗಾಯಾಳುಗಳು ಸಾವನ್ನಪ್ಪಿರುವ ಉದಾಹರಣೆಗಳೂ ಇವೆ. ಆದ್ದರಿಂದ ಆರೋಗ್ಯ ಇಲಾಖೆಯು ಈ ಬಗ್ಗೆ ಗಮನಹರಿಸಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ರಕ್ತ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಬೇಕಿದೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.

Tags: