Mysore
15
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಓದುಗರ ಪತ್ರ:  ರಷ್ಯಾ-ಭಾರತ ಇನ್ನೂ ಹತ್ತಿರ

ಓದುಗರ ಪತ್ರ

ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅತ್ಯಂತ ಭವ್ಯ ರೀತಿಯಲ್ಲಿ ಸ್ವಾಗತ ನೀಡಿ, ಆ ದೇಶದೊಂದಿಗೆ ಹಲವಾರು ಮಹತ್ವದ ಒಪ್ಪಂದಗಳನ್ನು ಭಾರತ ಮಾಡಿಕೊಂಡಿದೆ. ರಷ್ಯಾದಿಂದ ತೈಲಮ ಖರೀದಿಸಬಾರದು ಎಂಬ ಅಮೆರಿಕದ ಫರ್ಮಾನಿನ ನಡುವೆಯೇ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಆರ್ಥಿಕ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ‘ಮುನ್ನೋಟ- ೨೦೩೦’ ಎಂಬ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ಸಹಿ ಹಾಕಿದ್ದಾರೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್ ಅವರನ್ನು ಸ್ವಾಗತಿಸಿದ್ದಾರೆ. ವಿಶ್ವ ಭೂಪಟದಲ್ಲಿ, ರಷ್ಯಾ ಹಾಗೂ ಭಾರತಕ್ಕೆ ತಮ್ಮದೇ ಆದ ವಿಶಿಷ್ಟ ರೀತಿಯ ಸ್ಥಾನಮಾನಗಳಿವೆ.

ಅಮೆರಿಕ ಮತ್ತು ಚೀನಾದ ನಂತರ ಅತ್ಯಂತ ಬಲಿಷ್ಠ ಮತ್ತು ಬಲಾಢ್ಯ ರಾಷ್ಟ್ರವೆನಿಸಿರುವ ರಷ್ಯಾ ಪರಮಾಣ ಅಸ್ತ್ರಗಳನ್ನು ಹೊಂದಿರುವ ದೇಶವಾಗಿದೆ. ಭಾರತ ಕೂಡ ಅತಿ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ವಿಶ್ವದ ನಾಲ್ಕನೆಯ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತ ಸೇರಿದಂತೆ ಅಮೆರಿಕದ ವಿಶ್ವದ ಹಲವಾರು ದೇಶಗಳ ಮೇಲೆ ದುಬಾರಿ ತೆರಿಗೆ ವಿಽಸಿ ಅಟ್ಟಹಾಸ ಮೆರೆಯುತ್ತಿರುವ ಸಂಧರ್ಭದಲ್ಲೇ ಭಾರತ ಮತ್ತು ರಷ್ಯಾ ಅತ್ಯಂತ ನಿಕಟ ಮಿತ್ರ ರಾಷ್ಟ್ರಗಳಾಗಿ ಹೊರಹೊಮ್ಮಿವೆ.

– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!