ಮೈಸೂರಿನ ದಾಸಪ್ಪ ವೃತ್ತದಿಂದ ವಾಟರ್ ವರ್ಕ್ಸ್‌ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಗರ ಸಾರಿಗೆ ಬಸ್ಸುಗಳು ಏಕಮುಖವಾಗಿ ಸಂಚರಿಸುವಂತಾಗಿದೆ. ಆಕಾಶವಾಣಿಯಿಂದ ನಗರ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳು ಎಂದಿನಂತೆ ಬರುತ್ತಿದ್ದು, ನಗರ ಬಸ್ ನಿಲ್ದಾಣದಿಂದ ಒಂಟಿ ಕೊಪ್ಪಲ್ ಮಾರ್ಗವಾಗಿ ಚಲಿಸುವ ಬಸ್ಸುಗಳು ಕೆ.ಆರ್.ಆಸ್ಪತ್ರೆಯಿಂದ ಬಂಬೂ ಬಜ಼ಾರ್ ಮುಖಾಂತರ ಆಕಾಶವಾಣಿ ಕಡೆಗೆ ಸಂಚರಿಸುತ್ತಿವೆ. ಇದರಿಂದ ರೈಲು ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ರೈಲ್ವೆ ನಿಲ್ದಾಣದಿಂದ ಹೆಬ್ಬಾಳು, ಇಲವಾಲ, ಕೆಆರ್‌ಎಸ್‌ಗೆ ತೆರಳುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಇದಲ್ಲದೆ ವಾರಾಂತ್ಯದಲ್ಲಿ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಹಾಗಾಗಿ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗಿದೆ. ಕೆಲವರು ಅನಿವಾರ್ಯವಾಗಿ ಆಟೋದಲ್ಲಿ ದುಬಾರಿ ಹಣ ನೀಡಿ ಪ್ರಯಾಣಿಸುವಂತಾಗಿದೆ.
ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್‌ಗೌಡ ಇದರ ಬಗ್ಗೆ ಮುತುವರ್ಜಿ ವಹಿಸಿ, ಆದಷ್ಟು ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು





