Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ: ಬಿಪಿಎಲ್‌ ಕಾರ್ಡುಗಳ ರದ್ದತಿ ಪರಿಷ್ಕರಣೆಯಾಗಲಿ

ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದತಿ ಮಾಡಿರುವ ವಿಚಾರ ತೀವ್ರ ಗೊಂದಲ ಸೃಷ್ಟಿಸಿದ್ದು, ಬಡ ಜನರ ಆತಂಕಕ್ಕೆ ಕಾರಣವಾಗಿದೆ. ಆದಾಯ ಪಾವತಿಸುತ್ತಿದ್ದಾರೆ, ಬಡತನ ರೇಖೆಗಿಂತ ಮೇಲಿದ್ದಾರೆ ಎಂಬ ಕಾರಣಗಳನ್ನು ನೀಡಿ ರಾಜ್ಯ ಸರ್ಕಾರ 22 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.

ನಾವು ಅನರ್ಹ ಕಾರ್ಡುಗಳನ್ನು ಮಾತ್ರ ರದ್ದು ಮಾಡಿದ್ದೇವೆ, ಅರ್ಹ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಗಳು ಮುಂದುವರಿಲಿವೆ, ಬಡ ವರ್ಗದ ಜನರಿಗೆ ಯಾವುದೇ ರೀತಿಯ ಮೋಸವಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗ್ಯಾರಂಟಿ ಫಲಾನುಭವಿಗಳನ್ನು ಪರಿಷ್ಕರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಪಡಿತರ ಚೀಟಿಗಳನ್ನು ರದ್ದು ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಆಧಾ‌ರ್ ಕಾರ್ಡ್ ದೃಢೀಕರಣ ಮಾಡದ ಅನೇಕ ಎಪಿಎಲ್ ಕಾರ್ಡ್‌ಗಳನ್ನೂ ರದ್ದು ಮಾಡಲಾಗಿದೆ.

ಬಿಪಿಎಲ್ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಜನರು ಕೇವಲ ಯಾತರಕ್ಕಾಗಿ ಮಾತ್ರವಲ್ಲದೆ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಆಯುಷ್ಮಾನ್ ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಬಳಸುತ್ತಾರೆ. ಆದರೆ ಸರ್ಕಾರ ತೆರಿಗೆ ಪಾವತಿಸುತ್ತಾರೆ ಎಂದು ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದರೆ ಅವರು ಪಡಿತರದ ಜತೆಗೆ ಅನೇಕ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಮರುಪರಿಶೀಲಿಸಬೇಕಿದೆ.

-ಸಿದ್ಧಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.

Tags: