ಕರ್ನಾಟಕದ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಭಾಗವಾಗಿರುವ ಅನೇಕ ಅಮೂಲ್ಯವಾದ ಶಿಲ್ಪಗಳು ಬ್ರಿಟಿಷ್ ಮ್ಯೂಜಿಯಂ (ಲಂಡನ್), ಲೂವ್ರೇ ಮ್ಯೂಜಿಯಂ (ಪ್ಯಾರಿಸ್), ಬೋಸ್ಟನ್ ಮ್ಯೂಜಿ ಯಮ್ ಆಫ್ ಫೈನ್ ಆರ್ಟ್ (ಅಮೆರಿಕ) ಮತ್ತು ಏಷಿಯನ್ ಆರ್ಟ್ ಮ್ಯೂಜಿಯಮ್ (ಸಾನ್ ಫ್ರಾನ್ಸಿಸ್ಕೋ)ಗಳಲ್ಲಿ ಹಲವಾರು ವರ್ಷಗಳಿಂದ ಉಳಿದುಕೊಂಡಿವೆ. ಇವುಗಳು ಹೊಯ್ಸಳ, ವಿಜಯನಗರ ಮತ್ತು ಚಾಲುಕ್ಯರ ಕಾಲಘಟ್ಟಗಳ ಶಿಲ್ಪಕಲೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಈ ಶಿಲ್ಪಗಳು ಕೇವಲ ಕಲೆಯ ಪ್ರತಿಬಿಂಬವಲ್ಲ, ಅವು ನಮ್ಮ ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆಯ ಭಾಗವಾಗಿವೆ. ಈ ಶಿಲ್ಪಗಳನ್ನು ಕರ್ನಾಟಕಕ್ಕೆ ವಾಪಸ್ ಪಡೆದು ನಮ್ಮ ಕಲಾ ಸಂಗ್ರಹಗಳಲ್ಲಿ ಪ್ರದರ್ಶಿಸುವುದರಿಂದ, ನಮ್ಮ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬಹುದು. ಆದರಿಂದ ನಮ್ಮ ಕರ್ನಾಟಕ ಸರ್ಕಾರ ಈ ಅಮೂಲ್ಯವಾದ ಶಿಲ್ಪಗಳನ್ನು ಮತ್ತು ಕಲಾಕೃತಿಗಳನ್ನು ಹಿಂಪಡೆಯಲು ಮುಂದಾಗಬೇಕು.
-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು





