ಮೈಸೂರಿನ ಲಷ್ಕರ್ ಮೊಹಲ್ಲಾದ ವೀರನಗೆರೆ ಮಾರಿಗುಡಿ ಸ್ಥಳದಲ್ಲಿ ಕುಡಿಯುವ ನೀರಿನ ಪೈಪು ಒಡೆದಿದ್ದು, ದುರಸ್ತಿ ಮಾಡಿದರೂ ಕಳಪೆ ಕಾಮಗಾರಿಯಿಂದಾಗಿ ಮತ್ತೆ ನೀರು ಪೋಲಾಗುತ್ತಿದೆ.
ನಗರ ಪಾಲಿಕೆಯ ವಲಯ ಕಚೇರಿ ೭ರ ಹಿಂಭಾಗದಲ್ಲೇ ಪೈಪ್ ಒಡೆದಿದ್ದರೂ ನಗರಪಾಲಿಕೆ ಸಿಬ್ಬಂದಿ ಗಮನಕ್ಕೆ ಬಂದಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಸಂಬಂಧ ಪಟ್ಟವರು ಕೂಡಲೇ ಇತ್ತ ಗಮನಹರಿಸಿ ಪೈಪ್ ದುರಸ್ತಿ ಮಾಡಿಸುವ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿದೆ.
– ಎನ್. ಶ್ರೀಕಂಠ ಮೂರ್ತಿ, ಲಷ್ಕರ್ ಮೊಹಲ್ಲಾ, ಮೈಸೂರು





