ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಸೆಂಥಿಲ್‌ಕುಮಾರ್ ಬಟ್ಟೆ ಅಂಗಡಿ ಸಮೀಪದ ದೊಡ್ಡ ಮೋರಿ ಪಕ್ಕದ ಒಳಚರಂಡಿ ಪೈಪ್‌ನಲ್ಲಿ ಕಸ ಕಟ್ಟಿಕೊಂಡಿದ್ದು, ಮ್ಯಾನ್ ಹೋಲ್‌ನಿಂದ ರಸ್ತೆಯ ಮೇಲೆ ಕೊಳಚೆ ನೀರಿ ಹರಿದು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.
ಮಹಾನಗರ ಪಾಲಿಕೆಯವರು ಕೂಡಲೇ ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ಸಂಗ್ರಹ ವಾಗಿರುವ ಕಸವನ್ನು ತೆರವು ಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
– ಅರುಣ, ಮೈಸೂರು





