ಮೈಸೂರಿನ ಕ್ಯಾತಮಾರನಹಳ್ಳಿ ದೊಡ್ಡಗೇಡಿ ಮುಖ್ಯ ರಸ್ತೆ ಹಾಗೂ ಸಿದ್ದಪ್ಪಾಜಿ ತಿರುವಿನ ಹಿಂಭಾಗದ ರಸ್ತೆಯ ಕನ್ಸರ್ವೆನ್ಸಿ (ಗಲ್ಲಿ ) ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲು ಅಗೆದು ಹಲವು ತಿಂಗಳಾಗಿದೆ ಆದರೂ ಯಾರೂ ಈ ಕಾಮಗಾರಿ ಪೂರ್ಣಗೊಳಿಸಲು ಮನಸ್ಸು ಮಾಡುತ್ತಿಲ್ಲ. ಈ ಅಗೆದಗಲ್ಲಿ ರಸ್ತೆಯಿಂದಲೇ ವಯಸ್ಸಾದವರು ಮಕ್ಕಳು ಓಡಾಡುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
– ಪಿ.ಸಿ.ಸೋಮು, ಕ್ಯಾತಮಾರನಹಳ್ಳಿ ಮೈಸೂರು





