ಎಚ್.ಡಿ.ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ಸಮೀಪ ಹಾದುಹೋಗಿರುವ ಹೆಬ್ಬಾಳು ಜಲಾಶಯದ ನಾಲೆಯ ಸೇತುವೆಯ ಮೇಲೆ ಬೃಹತ್ ಗುಂಡಿ ನಿರ್ಮಾಣವಾಗಿದ್ದು, ಸೇತುವೆ ಕುಸಿದು ಬೀಳುವ ಅಪಾಯದಲ್ಲಿದೆ.
ಈ ಸೇತುವೆ ಮೇಲೆ ನಿರ್ಮಾಣವಾಗಿರುವ ಈ ಗುಂಡಿ, ಮಳೆ ಬಂದಂತೆಲ್ಲ ಹಂತ ಹಂತವಾಗಿ ಕುಸಿಯುತ್ತಿದೆ. ಇಷ್ಟಿದ್ದರೂ ಜನರು ವಿಧಿ ಇಲ್ಲದೇ ಇದೇ ಸೇತುವೆ ಮೇಲೆ ಓಡಾಡಬೇಕಿದೆ.
ಈ ಗುಂಡಿ ನಿರ್ಮಾಣವಾಗಿ ಸಾಕಷ್ಟು ವರ್ಷಗಳೇ ಕಳೆದಿವೆ. ಆದಾಗ್ಯೂ ಗ್ರಾಮ ಪಂಚಾಯಿತಿಯವರು ಗುಂಡಿ ಮುಚ್ಚುವುದಕ್ಕಾಗಲಿ ಅಥವಾ ಸೇತುವೆಯನ್ನು ಮರು ನಿರ್ಮಾಣ ಮಾಡುವುದಕ್ಕಾಗಲಿ ಮುಂದಾಗಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಸಂಪೂರ್ಣ ಸೇತುವೆಯೇ ಕುಸಿದು ಬೀಳುವ ಅಪಾಯದಲ್ಲಿದೆ. ಆದ್ದರಿಂದ ಈ ಕ್ಷೇತ್ರದ ಶಾಸಕರು ಇದರ ಬಗ್ಗೆ ಗಮನಹರಿಸಿ ಸೇತುವೆಯನ್ನು ದುರಸ್ತಿ ಮಾಡಿಸಿಕೊಡಬೇಕಿದೆ.
-ಸಿದ್ಧಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ