ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ವಲಸೆ ಬರುವವರ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಅವರೊಡನೆ ಸಂವಹನ ನಡೆಸಲು ಕನ್ನಡಿಗರೂ ಕೂಡ ಅವರ ಭಾಷೆಯನ್ನೇ ಬಳಸುವಂತಾಗುತ್ತಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಪ್ರಮುಖವಾಗಿ ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿಯೂ ಅನ್ಯಭಾಷೆಗಳ ಜಾಹೀರಾತು ಫಲಕಗಳು ಹೆಚ್ಚಾಗಿ ಕಾಣುತ್ತಿವೆ.
ಕರ್ನಾಟಕ ಸರ್ಕಾರ ರಾಜ್ಯದ ಆಡಳಿತ ಭಾಷೆ ‘ಕನ್ನಡ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನ್ಯ ಭಾಷೆಗಳಲ್ಲಿರುವ ಜಾಹೀರಾತು ಫಲಕಗಳು ಹಾಗೂ ವಿವಿಧ ರೀತಿಯ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ ಹೊರಡಿಸುವುದು ಅಗತ್ಯ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





