ಮೈಸೂರು ನಗರದ ಗೋಕುಲಂ ಬಡಾವಣೆಯಲ್ಲಿರುವ ವಿದ್ಯಾ ವರ್ಧಕ ಇಂಜಿನಿಯರಿಂಗ್ ಕಾಲೇಜಿನ ಬಳಿ ಹಲವು ಮರಗಳು ಒಣಗಿ ನಿಂತಿದ್ದು, ಯಾರ ಮೇಲಾದರೂ ಬಿದ್ದರೆ ಅನಾಹುತ ಸಂಭವಿಸುವುದು ಖಚಿತ.
ಒಣಗಿರುವ ಮರಗಳನ್ನು ತೆರವು ಗೊಳಿಸುವುದು ಮೈಸೂರು ಮಹಾ ನಗರ ಪಾಲಿಕೆಯ ಕರ್ತವ್ಯವಾಗಿದೆ. ಆದರೆ ಒಣ ಮರಗಳನ್ನು ತೆರವುಗೊಳಿಸುವ ಬದಲು ಅದರ ಬುಡಕ್ಕೆಟೈಲ್ಸ್‌ಗಳನ್ನು ಹಾಕಿ ಶೃಂಗಾರ ಗೊಳಿಸಲಾಗಿದೆ. ಕೂಡಲೇ ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು ಒಣಗಿರುವ ಈ ಮರಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಾಗಿದೆ.
– ವಿಜಯ್ ಹೆಮ್ಮಿಗೆ, ಮೈಸೂರು





