ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ಒಂದನೇ ತರಗತಿ ದಾಖಲಾತಿಗೆ ೫ ವರ್ಷ ೫ ತಿಂಗಳು ಸಡಿಲಿಕೆ ಮಾಡಿರುವುದರಿಂದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಶಿಕ್ಷಣ ಮಂತ್ರಿಗಳು ತಿಳಿಸಿದ್ದಾರೆ.
ಮುಂದಿನ ವರ್ಷ ೬ ವರ್ಷ ಆಗಿರಲೇಬೇಕು ಎಂಬ ನೀತಿಯನ್ನೇ ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಆದರೆ ಈ ಕ್ರಮ ಸರಿಯಲ್ಲ. ಮುಂದಿನ ವರ್ಷವೂ ಪೋಷಕರು ಇದೇ ರೀತಿ ತೊಂದರೆಗೆ ಸಿಲುಕುತ್ತಾರೆ. ಪೋಷಕರು ನೆಮ್ಮದಿಯಿಂದ ಇರಬೇಕಾದರೆ ರಾಜ್ಯದಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ೫ ವರ್ಷ ೫ ತಿಂಗಳು ಆಗಿರಬೇಕು ಎಂಬ ನಿಯಮವನ್ನು ಶಾಶ್ವತವಾಗಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.
– ಎಂ. ಎಸ್. ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು





