Mysore
30
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಓದುಗರ ಪತ್ರ: ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಿ

ಓದುಗರ ಪತ್ರ

ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ. ವಿದ್ಯಾರ್ಥಿಗಳ ಬ್ಯಾಗ್ ತೂಕವು ದೇಹದ ತೂಕದ ಶೇ.೧೦ ಮೀರಬಾರದು ಎನ್ನುವ ನಿಯಮ ಕಾಗದದ ಮೇಲೆಯೇ ಉಳಿದಿದೆ.

ಅಂಕಿಅಂಶಗಳ ಪ್ರಕಾರ ಸುಮಾರು ಶೇ. ೪೫-೫೦ ಶಾಲಾ ಮಕ್ಕಳು ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅತಿಯಾದ ಬ್ಯಾಗ್ ತೂಕ. ಆದರೂ ಶಿಕ್ಷಣ ಇಲಾಖೆ ಈ ವಿಷಯದಲ್ಲಿ ಗಂಭೀರ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಪೋಷಕರು ಪ್ರಶ್ನಿಸುತ್ತಿದ್ದರೂ, ಶಾಲೆಗಳ ಮೇಲೆ ನಿಯಮಿತ ಪರಿಶೀಲನೆ ಮತ್ತು ದಂಡ ಕ್ರಮಗಳಿಲ್ಲ. ತರಗತಿ ಮಟ್ಟದಲ್ಲಿ ಬ್ಯಾಗ್ ತೂಕ ಪರಿಶೀಲನೆ, ಹಗುರವಾದ ಪುಸ್ತಕಗಳು ಮತ್ತು ಡಿಜಿಟಲ್ ನೋಟ್ಸ್ ಬಳಸಬಹುದಾಗಿದೆ.

ಮಗುವಿನ ಬೆನ್ನೆಲುಬು ಸುರಕ್ಷಿತವಾದರೆ ಮಾತ್ರ ಭವಿಷ್ಯ ಸುರಕ್ಷಿತ. ಶಿಕ್ಷಣ ಇಲಾಖೆ ತಕ್ಷಣ ಜವಾಬ್ದಾರಿ ವಹಿಸಬೇಕು. ಇದಲ್ಲದೆ, ವೈದ್ಯಕೀಯ ವರದಿಗಳಂತೆ ಪ್ರತಿ ೫ ಮಕ್ಕಳಲ್ಲಿ ೨ ಮಕ್ಕಳು ಶಾಲಾ ವಯಸ್ಸಿನಲ್ಲೇ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಶಿಕ್ಷಣದ ಒತ್ತಡ ಮಕ್ಕಳ ದೇಹದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ. ಶಿಕ್ಷಣವು ಜ್ಞಾನ ಮಾತ್ರವಲ್ಲ, ಆರೋಗ್ಯವನ್ನೂ ರಕ್ಷಿಸಬೇಕು.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!