Mysore
16
few clouds

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ

dgp murder case

ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ ಪುಸ್ತಕಗಳು ಮತ್ತು ನೋಟ್ ಪುಸ್ತಕಗಳಷ್ಟೇ ಅಲ್ಲದೆ ಊಟದ ಬಾಕ್ಸ್, ನೀರಿನ ಬಾಟಲಿಯನ್ನೂ ತೆಗೆದುಕೊಂಡು ಹೋಗಬೇಕಿದೆ. ಇದು ಶಾಲಾಮಕ್ಕಳಿಗೆ ಅನಿವಾರ್ಯವೆನಿಸಿದೆ.ಎಳೆಯ ಮಕ್ಕಳ ಬೆನ್ನುಗಳಿಗೆ ಭಾರ ಕಡಿಮೆ ಮಾಡುವುದು ಇಂದಿನ ಅಗತ್ಯವೂ ಆಗಿದೆ.ಈ ವಿಷಯವಾಗಿ ಶಿಕ್ಷಣ ಆಸಕ್ತರು ಚಿಂತನೆ ನಡೆಸಬೇಕಿದೆ. ಪಠ್ಯ ಪುಸ್ತಕಗಳನ್ನು ಎರಡು ಪ್ರತ್ಯೇಕ ಭಾಗಗಳಾಗಿ ವಿಂಗಡಿಸಿ ಎರಡು ಬೇರೆ ಬೇರೆ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸುವುದು. ಉದಾಹರಣೆಗೆ, ಒಂದು ವಿಷಯದ ಪುಸ್ತಕದಲ್ಲಿ ೨೦ ಅಧ್ಯಾಯಗಳು ಇದ್ದರೆ, ಮೊದಲ ೧೦ ಅಧ್ಯಾಯ ಒಳಗೊಂಡ ಪುಸ್ತಕ ಭಾಗ ೧, ಉಳಿದ ೧೦ ಅಧ್ಯಾಯಗಳ ಪುಸ್ತಕ ಭಾಗ..೨ ಎಂದು ಎರಡು ಪುಸ್ತಕಗಳನ್ನು ಮುದ್ರಿಸುವುದು. ಮೊದಲ ಭಾಗದ ಪಠ್ಯ ಕ್ರಮ ಮುಗಿಯುವವರೆಗೆ ಮಕ್ಕಳು ಭಾಗ..೧ ಪುಸ್ತಕಗಳನ್ನು ಮಾತ್ರ ಕೊಂಡೊಯ್ಯುವುದು. ಅದಾದ ಬಳಿಕ ಭಾಗ..೨ ಪುಸ್ತಕಗಳನ್ನು ಕೊಂಡೊಯ್ಯಬಹುದು. ಇದನ್ನು ಅನುಸರಿಸಿದರೆ ಶಾಲಾ ಮಕ್ಕಳ ಬ್ಯಾಗ್ ಗಳ ಭಾರವನ್ನು ಅರ್ಧದಷ್ಟು ಕಡಿಮೆ ಮಾಡಲು ಸಾಧ್ಯ. ಪುಸ್ತಕ ಎರಡು ಭಾಗ ಮುದ್ರಿಸಲು ಸ್ವಲ್ಪ ಹೆಚ್ಚು ಖರ್ಚು ತಗಲಿದರೂ, ಮಕ್ಕಳಿಗೆ ಇದರಿಂದ ಹೊರೆ ಕಡಿಮೆ ಆಗುವುದರಿಂದ ಆಗುವ ಲಾಭಕ್ಕೆ ಹೋಲಿಸಿದರೆ ಆ ಖರ್ಚು ನಗಣ್ಯ. ಈ ಸಲಹೆಯನ್ನು ಶಿಕ್ಷಣ ಇಲಾಖೆಯವರು ಪರಿಶೀಲಿಸಬೇಕಿದೆ.

– -ಲಕ್ಷ್ಮಣ್ ಗೊರ್ಲಕಟ್ಟೆ ,ಬೋಗಾದಿ, ಮೈಸೂರು

Tags:
error: Content is protected !!