ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನ ಮೂಲಕವೇ ತೆರಳಬೇಕಾಗಿದೆ. ಆದರೆ ಪ್ರಯಾಣ ದರ ಎರಡೂ ಕಡೆ ಸೇರಿ ೭೦ ರೂ.ಗಳನ್ನು ನಿಗದಿ ಮಾಡಲಾಗಿದೆ. ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ ಕೇವಲ ೪ರಿಂದ ೫ ಕಿಲೋಮೀಟರ್ ಪ್ರಯಾಣ ಆಗಬಹುದು.
ಟಿಕೆಟ್ ದರ ದುಬಾರಿಯಾಗಿರುವುದಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ಬಸ್ಸುಗಳು ಪ್ರವಾಸಿಗರಿಂದ ತುಂಬಿರುತ್ತವೆ. ಆಗ ಬಸ್ಸಿನಲ್ಲಿ ನಿಂತಿಕೊಂಡೇ ಪ್ರಯಾಣ ಮಾಡುವುದು ಅನಿವಾರ್ಯವಾಗುತ್ತದೆ. ಸಂಬಂಧಪಟ್ಟವರು ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳ ಬೇಕು.
-ಎನ್.ಪಿ.ಪರಶಿವಮೂರ್ತಿ ನಂಜೀಪುರ, ಸರಗೂರು ತಾ.




