ಮೈಸೂರಿನ ರಾಜೇಂದ್ರ ನಗರದ ಮುಖ್ಯ ರಸ್ತೆಯಲ್ಲಿದ್ದ ಹಾಪ್ ಕಾಮ್ಸ್ ಮಳಿಗೆಯನ್ನು ಕೆಲವು ದಿನಗಳಿಂದ ಮುಚ್ಚಲಾಗಿದೆ. ಹಾಪ್ ಕಾಮ್ಸ್ ಮುಖಾಂತರ ನೇರವಾಗಿ ರೈತರಿಂದ ಗ್ರಾಹಕರಿಗೆ ಹಣ್ಣು-ತರಕಾರಿ ಸಿಗುತ್ತಿದ್ದು, ಬೆಲೆಯೂ ಕಡಿಮೆ ಇತ್ತು. ಆದರೆ ಹಾಪ್ ಕಾಮ್ಸ್ ಮಳಿಗೆ ಮುಚ್ಚಿರುವುದರಿಂದ ಸಾರ್ವಜನಿಕರು ದುಬಾರಿ ಬೆಲೆ ನೀಡಿ ರಸ್ತೆಯ ಬದಿಯಲ್ಲಿ ಹಣ್ಣು, ತರಕಾರಿಯನ್ನು ಖರೀದಿಸುವುದು ಅನಿವಾರ್ಯವಾಗಿದೆ. ಜಿಲ್ಲಾ ಹಾಪ್ ಕಾಮ್ಸ್ ಅಧಿಕಾರಿಗಳು ಶೀಘ್ರವಾಗಿ ಹಾಪ್ ಕಾಮ್ಸ್ ಮಳಿಗೆಯನ್ನು ಪುನರಾರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಗೋವಿತ್ ಕಿರಣ್, ರಾಜೇಂದ್ರ ನಗರ, ಮೈಸೂರು





