ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಸಮೀಪದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಿ ಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ 8 ವಾಸದ ಮನೆಗಳನ್ನು ನಿರ್ಮಿಸಲಾಗಿದೆ.
2011-12ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2 ಕಟ್ಟಡಗಳಲ್ಲಿ 8 ಮನೆಗಳನ್ನು ನಿರ್ಮಿಸಲಾಯಿತು. ಈ ಕಟ್ಟಡಗಳು ನಿರ್ಮಾಣವಾದ ಆರಂಭದ ಒಂದೆರಡು
ವರ್ಷಗಳನ್ನು ಹೊರತುಪಡಿಸಿದರೆ ಉಳಿದ 10-12 ವರ್ಷಗಳಿಂದ ಈ ಮನೆಗಳು ಖಾಲಿ ಬಿದ್ದಿವೆ. ಈ ಕಟ್ಟಡಗಳಿಗೆ ಸಮರ್ಪಕವಾದ ಮೂಲಸೌಕರ್ಯಗಳನ್ನು ಒದಗಿಸದ ಪರಿಣಾಮ ಈ ಮನೆಗಳಲ್ಲಿ ಯಾರೂ ವಾಸಿಸಲು ಸಾಧ್ಯವಾಗದೆ ಪಾಳು ಬಿದ್ದಿವೆ.
ಕೆಲ ವರ್ಷಗಳ ಹಿಂದೆ 8 ಮನೆಗಳ ಪೈಕಿ 4 ಮನೆಗಳನ್ನು ಸುಮಾರು 4,50,000 ರೂ. ವೆಚ್ಚದಲ್ಲಿ ರಿಪೇರಿ ಮಾಡಲಾಯಿತು. ಆದಾಗ್ಯೂ ಸೌಕರ್ಯಗಳ ಕೊರತೆಯಿಂದಾಗಿ ಈಗ ಈ ಮನೆಗಳು ಮತ್ತೆ ಪಾಳು ಬೀಳುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಈ ಕಟ್ಟಡಗಳ ಸದ್ಬಳಕೆಗೆ ಕ್ರಮವಹಿಸಬೇಕಿದೆ.
-ಪ್ರಶಾಂತ್, ಅಂತರಸಂತೆ, ಎಚ್.ಡಿ.ಕೋಟೆ ತಾ.