ಮೈಸೂರಿನ ಶಿವರಾಮ್ ಪೇಟೆ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರ ಹಾಗೂ ರಾಜ್ ಕಮಲ್ ಥಿಯೇಟರ್ ನಡುವೆ ಬರುವ ವೃತ್ತದಲ್ಲಿ ದಿನನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ, ಆದರೆ ಈ ಸರ್ಕಲ್‌ನಲ್ಲಿ ಕೆಲವು ಸಂದರ್ಭದಲ್ಲಿ ವಾಹನ ಚಾಲಕರು ಅಡ್ಡಾ ದಿಡ್ಡಿ ಚಾಲನೆ ಮಾಡುತ್ತಿದ್ದು, ಹಲವಾರಿ ಬಾರಿ ಅಪಘಾತಗಳು ಸಂಭವಿಸಿವೆ. ಯಾವುದೇ ವಾಹನ ಒಂದು ವೃತ್ತವನ್ನು ಬಳಸಿಕೊಂಡು ಹೋಗುವುದು ಒಂದು ನಿಯಮ, ಆದರೆ ಇಲ್ಲಿ ಅದು ತದ್ವಿರುದ್ಧವಾಗಿದೆ. ವಾಹನ ಸವಾರರು ವೃತ್ತವನ್ನು ಬಳಸದೆ ಸಂಚಾರ ನಿಯಮವನ್ನು ಉಲ್ಲಂಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಸರ್ಕಲ್ ಕೆ.ಆರ್.ಆಸ್ಪತ್ರೆ ಹತ್ತಿರದಲ್ಲೇ ಇರುವುದರಿಂದ ದಿನಕ್ಕೆ ಲೆಕ್ಕವಿಲ್ಲದಷ್ಟು ಆಂಬ್ಯುಲೆನ್ಸ್ ಗಳು ರೋಗಿಗಳನ್ನು ಕರೆದುಕೊಂಡು ಅದೇ ಮಾರ್ಗದಲ್ಲಿ ಹೋಗುತ್ತವೆ. ಈ ಸರ್ಕಲ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಇದ್ದರೂ ಕೆಲವು ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸಂಬಂಧಪಟ್ಟವರು ಕೂಡಲೇ ಅಡ್ಡಾದಿಡ್ಡಿ ವಾಹನ ಚಾಲನೆಗೆ ಕಡಿವಾಣ ಹಾಕಬೇಕಾಗಿದೆ.
-ಬಿ.ಎಸ್.ಸಾಯಿ ಸಂದೇಶ್, ಮೈಸೂರು





